Breaking News

ನಮ್ಮನ್ನ ಸೋಲಿಸಲು ಎಲ್ಲಿಂದ‌ ಡೈರೆಕ್ಷನ್‌ಬಂದಿದೆ ಎಂದು ನನಗೆ ಗೊತ್ತಿತ್ತು.

ಬೆಳಗಾವಿ-ಇನ್ನು ನೀವು ಸಣ್ಣವರಿದ್ದಿರಿ ಇನ್ನು ಈಗ ಎಲ್ ಬೋರ್ಡ್ ಇದ್ದಿರಿ ಅಂದ್ರೆ ಲರ್ನಿಂಗ್ ಸ್ಟೇಜ್ ನಲ್ಲಿದ್ದೀರಿ.ಈಗ ಒಂದು ವರ್ಷ ಆಯ್ತು ಅಷ್ಟೆ ಬಹಳ‌ ಸ್ಲೋ‌ ಇರಬೇಕು.ಗಾಡಿ ಸ್ಲೋ ಇರಬೇಕು ಬೀಳಬಾರದು ಬಿದ್ದರೆ ಆರ್ ಟಿ ಒ‌ಲೈನ್ಸ್ ಕೊಡಲ್ಲ‌,ಆರ್ ಟಿ ಒ ಕೈಯಲ್ಲಿ ದಾಟಬೇಕು ಎಲ್ಲ ಪರಿಶೀಲಿಸಿ ನಂತರ ಲೈಸನ್ಸ್ ಕೊಡ್ತಾರೆ.ತಮ್ಮನ್ನು ತಾವು ಆರ್ ಟಿ ಒ ಗೆ ಹೋಲಿಸಿಕೊಂಡು ಕುಡಚಿ ಶಾಸಕ ತಮ್ಮನ್ನವರ್ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದ ಕಿವುಮಾತು ಈ ರೀತಿಯಾಹಿತ್ತು.

ಇಂದು ಹಾರೂಗೇರಿಯಲ್ಲಿ
ನೂತನ ಸಂಸದರ ಅಭಿನಂದನಾ‌ ಸಮಾವೇಶದಲ್ಲಿ ಸತೀಶ್ ಜಾರಕಿಹೊಳಿ ಅವರು ಮಾತಾಡಿದ್ರು.ತಮ್ಮ ವಿರೋಧಿಗಳ‌ ವಿರುದ್ಧ ಹರಿಹಾಯ್ದ ಸಚಿವ ಸತೀಶ ಜಾರಕಿಹೊಳಿ,ಶಾಸಕ‌ ಮಹೇಂದ್ರ ತಮ್ಮನ್ನವರ್ ವಿರುದ್ಧ ಮತ್ತೆ ‌ಹರಿಹಾಯ್ದರು.ಕುಡಚಿ ಒಂದೇ ಊರಲ್ಲಿ ೧೮ ಸಾವಿರ ಮತಗಳು ಬಂದಿವೆ.ಇನ್ನು ನಾಲ್ಕು ಸಾವಿರ ಮತಗಳು ಮಾತ್ರ ಉಳಿದವ.ಕಳೆದ ಬಾರಿ ನಿಮಗೆ ಬಿದ್ದ ಮತಗಳು ಈ ಬಾರಿ ಬಿಜೆಪಿಗೆ ಹೋಗಿವೆ.ಸುಮ್ಮನೆ ಆರೋಪ‌ ಮಾಡಲು ನಾನು ಖಾಲಿ ಇಲ್ಲ.ಯಾರು‌ ಕೆಲಸ‌ ಮಾಡಿಲ್ಲ‌ ಅವರ ವಿರುದ್ಧ ಆರೋಪ‌ ಮಾಡಿದ್ದೆನೆ. ಎಲ್ಲಾ ಕಡೆ ಮೋಸ ಆಗಿದ್ದರೆ ನಾವು ಗೆಲ್ಲುವುದು ಕಠಿಣ ಆಗ್ತಿತ್ತು.ತಪ್ಪಾಯ್ತು ಎಂದು ಒಪ್ಪಿಕೊಂಡು ಸರಿಪಡಿಸಿಕೊಳ್ಳುವುದು ಒಳ್ಳೇಯದು ಎಂದು ಸತೀಶ್ ಶಾಸಕ ತಮ್ಮನ್ನವರ್ ಗೆ ಕಿವಿಮಾತು ಹೇಳಿದ್ರು.

ರಾಜಕೀಯದಲ್ಲಿ ಹೊಂದಾಣಿಕೆ‌ ಇರಬೇಕು ಸರಿಪಡಿಸಿಕೊಳ್ಳಬೇಕು.ನಮ್ಮನ್ನ ಸೋಲಿಸಲು ಎಲ್ಲಿಂದ‌ ಡೈರೆಕ್ಷನ್‌ಬಂದಿದೆ ಎಂದು ನನಗೆ ಗೊತ್ತಿತ್ತು.ಘಾಟಗೆಯವರ ಚಾಡಿ ಮಾತು ಕೇಳ್ತಾರೆ ಅಂತ ಹೇಳಿದ್ರು. ನಾನು ಘಾಟಗೆ ಅಲ್ಲ.ನಾನು ನನ್ನ ಹೆಂಡತಿ ಮಕ್ಕಳ ಮಾತೂ ಕೇಳಲ್ಲ.ಅವರ ಕೆಲಸ ಇದ್ರೆ ಅವರ ಕೆಲಸ ನಾವು ಮಾಡ್ತಿವಿ.ನಿಮ್ಮದಿದ್ರೆ ನಿಮ್ಮ ಕೆಲಸ ಮಾಡ್ತಿವಿ.ಘಾಟಗೆ ಹಾಗೂ ನೀವು ಕುಸ್ತಿ ಹಿಡಿರಿ ಈಗ ಚುನಾವಣೆಗೆ ನಿಂತಿದ್ದು ನಾವು.ನಮ್ಮ ಚುನಾವಣೆಗೆ ಯಾಕೆ ತೊಂದ್ರೆ ಮಾಡಿದ್ರಿ ಎಂದು ಸತೀಶ ತಮ್ಮನ್ನವರ ಅವರನ್ನು ಪ್ರಶ್ನಿಸಿದರು.

ನಿಮಗೆ ಟಿಕೇಟ್ ಕೊಡಿಸಿ ಸಪೋರ್ಟ್ ಮಾಡಿದ್ವಿ ನೀವ್ಯಾಕೆ‌ ಹೀಗೆ ಮಾಡಿದ್ರಿ.ಕೇವಲ ತಮ್ಮನ್ನವರ್ ಮಾತ್ರ ಅಲ್ಲ‌ ನಮ್ಮ ವಿರುದ್ದ‌ ಹೇಳಿಕೆ ಕೊಡುವವರು ರಾಜ್ಯದ ತುಂಬ ಇದ್ದಾರೆ.ದೇವೆಗೌಡ,ಸಿದ್ದರಾಮಯ್ಯ,‌ಯಡಿಯೂರಪ್ಪ ಎಷ್ಟು ಜನರನ್ನ‌‌‌ ಬೆಳೆಸಿದರು ಅವರನ್ನು ಬೈತಾರೆ.ನಾವು ಇದನ್ನ ಗಂಭೀರವಾಗಿ ಪರಿಗಣಿಸಲ್ಲ ಆದರೆ ಬೇಟೆ ಸಿಗೋದನ್ನ ಕಾಯ್ತಾ ಕೂರ್ತಿವಿ.ರಾಜಕಾರಣ ಯಾರ ಮನೆಯ ಆಸ್ತಿಯೂ ಅಲ್ಲ.ಜನ ಯಾರನ್ನ ಬೇಕಾದ್ರೂ ಗೆಲ್ಲಿಸ್ತಾರೆ ಯಾರನ್ನ‌‌‌‌‌ ಬೇಕಾದ್ರೂ ಸೋಲಿಸ್ತಾರೆ ಅಂದ್ರು ಸಚಿವ ಸತೀಶ್ ಜಾರಕಿಹೊಳಿ.

ಬೇರೆ ಪಕ್ಷಗಳಿಗೆ ಭವಿಷ್ಯ ಇಲ್ಲ‌ ಎಂದು ಎಲ್ಲರೂ ಬಿಜೆಪಿಗೆ ಹೊರಟಿದ್ರು,ಆದರೆ ಒಂದೇ‌ ಚುನಾವಣೆ ಜನ ಎಲ್ಲಾ ಸಾಧ್ಯ ಇದೆ ಎನ್ನುವುದು ತೋರಿಸಿದರು.ಯಾರನ್ನಾದ್ರೂ ಗೆಲ್ಲಿಸ್ತಿವಿ ಸೋಲಿಸ್ತಿವಿ ಎಂದು ಜನ ತೋರಿಸಿಕೊಟ್ಟಿದ್ದಾರೆಅವಕಾಶ ಸಿಕ್ಕಾಗ ಒಳ್ಳೆಯ ಕೆಲಸ ಮಾಡಲು ಕಲಿಯಬೇಕು ಎಂದ ಸತೀಶ ಜಾರಕಿಹೊಳಿ ಹೇಳಿದ್ರು.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *