ಬೆಳಗಾವಿ- ಅಂಗನವಾಡಿ ಕಾರ್ಯಕರ್ತೆಯರಿಗೆ ಮೋಬೈಲ್ ವಿತರಣೆ ಮಾಡಿದ್ದು ಕೇಂದ್ರದ ಅನುದಾನದಲ್ಲಿ ಎಂದು ಶಾಸಕ ಅಭಯ ಪಾಟೀಲ ಹೇಳಿಕ ನೀಡಿದ ಬೆನ್ನಲ್ಲಿಯೇ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ಅದಕ್ಕೆ ಸ್ಪಷ್ಟನೆ ನೀಡಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಯೋಜನೆಯಡಿಯಲ್ಲಿ ಮೋಬೈಲ್ ಹಂಚಿಕೆ ಮಾಡಲಾಗಿದೆ ಎಂದು ಚನ್ನರಾಜ್ ಹೇಳಿದ್ದಾರೆ.
ಬೆಳಗಾವಿ ಸುದ್ದಿ ಡಾಟ್ ಕಾಮ್ ಜೊತೆ ಮಾತನಾಡಿದ ಚನ್ನರಾಜ್ ಹಟ್ಟಿಹೊಳಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೋಬೈಲ್ ಕೊಡಬೇಕು ಎನ್ನುವ ಬೇಡಿಕೆ ಐದು ವರ್ಷಗಳಿಂದ ಇತ್ತು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಫೋಷನ್ ಯೋಜನೆಯಡಿಯಲ್ಲಿ ಐದು ವರ್ಷದ ಬೇಡಿಕೆ ಈಡೇರಿಸಲಾಗಿದೆ.ಫೋಷನ್ ಯೋಜನೆಯಲ್ಲಿ ಶೇ % 60 ರಷ್ಟು ಕೇಂದ್ರ ಸರ್ಕಾರದ ಸಹಭಾಗಿತ್ವ ಶೇ % 40 ರಷ್ಟು ರಾಜ್ಯ ಸರ್ಕಾರದ ಸಹಭಾಗಿತ್ವ ಇದೆ ಅಂಗನವಾಡಿ ಕಾರ್ಯಕರ್ತರಿಗೆ ಮೋಬೈಲ್ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಮೇಲೆ ಕರುಣೆ ತೋರಿಲ್ಲ,ಇದು ಕೇಂದ್ರದ ವಿಶೇಷ ಅನುದಾನವೂ ಅಲ್ಲ,ಅಂಗನವಾಡಿ ಕಾರ್ಯಕರ್ತರಿಗೆ ಮೋಬೈಲ್ ಸಿಕ್ಕಿದ್ದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ವಿಶೇಷ ಕಾಳಜಿಯೇ ಕಾರಣ ಎಂದು ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ತಿಳಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ,ಹಿರೀಯ ನಾಗರೀಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಪೋಷನ್ ಅಭಿಯಾನ ಯೋಜನೆಯ್ನು ಸದುಪಯೋಗ ಪಡೆಸಿಕೊಂಡು ಅಂಗನವಾಡಿ ಕಾರ್ಯಕರ್ತೆಯರ ಐದು ವರ್ಷದ ಬೇಡಿಕೆಯನ್ನು ಈಡೇರಿಸಿದ್ದಾರೆ.ಎಂದು ಚನ್ನರಾಜ್ ಹರ್ಷ ವ್ಯಕ್ತ ಪಡಿಸಿದ್ದಾರೆ.