ಬೆಳಗಾವಿ – ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಕಳಸಾ ಬಂಡೂರಿ ಮಹಾದಾಯಿ ಸಮಸ್ಯೆ ಮುಗಿದು ಹೋಯ್ತು ಎಂದು ಪೇಡೆ ತಿಂದಿದ್ದು ಆಯ್ತು, ಸಂಭ್ರಮ ಪಟ್ಟಿದ್ದು ಆಯ್ತು ಆದ್ರೆ ಕಳಸಾ ಬಂಡೂರಿ ನಾಲೆಯಲ್ಲಿ ನೀರು ಹರಿಯಲಿಲ್ಲ ತಡೆ ಗೋಡೆ ತೆರವು ಆಗಲಿಲ್ಲ,ಕಳೆದ ಎರಡು ವರ್ಷಗಳಿಂದ ಮೌನವಾಗಿದ್ದ ಈ ವಿಚಾರಕ್ಕೆ ಈಗ ಮತ್ತೆ ಮರುಜೀವ ಬಂದಿದೆ ಎರಡು ದಿನದ ಹಿಂದೆ ಗೋವಾ ಸಿಎಂ ಮಾಡಿದ ಟ್ವೀಟ್ ನಿಂದಾಗಿ ಕಳಸಾ ಬಂಡೂರಿ,ಮಹಾದಾಯಿ ಜಲಾನಯನ ಪ್ರದೇಶ ಈಗ ಮತ್ತೆ ಚರ್ಚೆಗೆ ಬಂದಿದೆ.
ಇಂದು ಬೆಳಗ್ಗೆ ಸುರ್ಯೋದಯ ಆಗುತ್ತಿದ್ದಂತೆ ಕೇಂದ್ರದ ಪ್ರವಾಹ ಸಮೀತಿ ಕಳಸಾ ಬಂಡೂರಿ ಮತ್ತು ಮಹಾದಾಯಿ ಜಲಾನಯನ ಪ್ರದೇಶಕ್ಕೆ ಭೇಟಿ ನೀಡಲಿದೆ. ಈ ಸಮೀತಿ ಅಲ್ಲಿಯ ಸ್ಥಿತಿಗತಿಗಳ ಬಗ್ಗೆ ಅವಲಕೋನ ಮಾಡಲಿದೆ. ಪ್ರವಾಹ ಸಮೀತಿಯ ಭೇಟಿಯ ವಿಚಾರ ಈಗ ಕಳಸಾ ಬಂಡೂರಿ,ಮಹಾದಾಯಿ ಬಗ್ಗೆ ಚಿಂತನೆ ಮಾಡುವಂತೆ ಮಾಡಿದೆ.ಇಂದು ಪ್ರವಾಹ ಸಮೀತಿಯ ಕಾರ್ಯವೈಖರಿ ಎಲ್ಲರ ಗಮನ ಸೆಳೆಯಲಿದೆ.
ಪ್ರವಾಹ ಸಮೀತಿಯ ಭೇಟಿ, ಗೋವಾ ಸರ್ಕಾರದ ಕ್ಯಾತೆ, ಉತ್ತರ ಕರ್ನಾಟಕದ ಜನರನ್ನು ಕೆರಳಿಸಿದೆ.ಪ್ರವಾಹ ಸಮೀತಿ ಭೇಟಿಯ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ.ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದೊಂದು ಸಾಮಾನ್ಯ ಪ್ರಕ್ರಿಯೆ ಆಗಿದೆ.ಪ್ರವಾಹ ಸಮೀತಿಯವರು ಬರ್ತಾರೆ ನೋಡ್ತಾರೆ,ಆದ್ರೆ ಅವರು ಯಾರಿಗೂ ವರದಿ ಸಲ್ಲಿಸುವದಿಲ್ಲ ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ಕನ್ನಡಪರ ಸಂಘಟನೆಗಳು ಗೋವಾ ಕ್ಯಾತೆಯ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಸಂಸದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬರಾವ್ರು ಬರ್ಲಿ ನೋಡ್ಕೊಂಡ ಹೋಗಲಿ ತೀರ್ಪು ಹೊರಬಂದಿದೆ ಹೊಸ ಡಿಪಿಆರ್ ಗೆ ಅನಯಮೋದನೆಯೂ ದೊರೆತಿದೆ.ವನ್ಯಜೀವಿಗಳ ಪ್ರಾಧಿಕಾರದ ಅನುಮತಿ ಸಿಗೋದಷ್ಟೇ ಬಾಕಿ ಇದೆ ಎಂದಿದ್ದಾರೆ.
ಈಗಲಾದರೂ ರಾಜ್ಯದ ಸರ್ವಪಕ್ಷಗಳ ನಾಯಕರು ಒಟ್ಟಾಗಿ ಕುಳಿತು ಚರ್ಚಿಸಿ ಕೇಂದ್ರದ ಬಳಿ ನಿಯೋಗ ಕರೆದುಕೊಂಡು ಹೋಗಿ ಕಳಸಾ- ಬಂಡೂರಿ- ಮಹಾದಾಯಿ ಸಮಸ್ಯೆಗೆ ಶಾಶ್ವತವಾಗಿ ಬಗೆ ಹರಿಸಿ, ನಮ್ಮ ನೆಲದಲ್ಲಿ ನೀರು ಹರಿಸಲಿ ಎನ್ನುವದೇ ಎಲ್ಲರ ಆಶಯವಾಗಿದೆ.