ಬೆಳಗಾವಿ – ಇಬ್ಬರೂ ಗೆಳೆಯರು ಮೋಬೈಲ್ ಖರೀಧಿ ಮಾಡಲು ಎಂ.ಕೆ ಹುಬ್ಬಳ್ಳಿಯಿಂದ ಬೆಳಗಾವಿಗೆ ಬಂದಿದ್ರು ರಾತ್ರಿ ಮೋಬೈಲ್ ಕೊಂಡು ಮರಳಿ ಹೋಗುವಾಗ ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದು ಓರ್ವ ಮೃತಪಟ್ಟಿದ್ದು ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಬೆಳಗಾವಿಯ ಯಡಿಯೂರಪ್ಪ ಮಾರ್ಗದಲ್ಲಿ ನಡೆದಿದೆ.
ಎಂ.ಕೆ ಹುಬ್ಬಳ್ಳಿ ಗ್ರಾಮದ 34 ವರ್ಷದ ಬಸವರಾಜ್ ಕಿಲ್ಲೆದಾರ್ ಈ ಅಪಘಾತದಲ್ಲಿ ಮೃತಪಟ್ಟಿದ್ದಾನೆ.ಪ್ರವೀಣ ಕಮ್ಮಾರ್ ಎಂಬಾತ ಗಾಯಗೊಂಡಿದ್ದಾನೆ.
ಇಬ್ಬರು ಗೆಳೆಯರು ನಿನ್ನೆ ಬೆಳಗಾವಿಗೆ ಬಂದಿದ್ರು ಮೋಬೈಲ್ ಖರೀಧಿ ಮಾಡಿ ಮರಳಿ ಎಂಕೆ ಹುಬ್ಬಳ್ಳಿಗೆ ಹೋಗುವಾಗ ಯಡಿಯೂರಪ್ಪ ಮಾರ್ಗದಲ್ಲಿ ನಾಯಿ ಅಡ್ಡ ಬಂದ ಕಾರಣ ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದು ಈ ಅಫಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ