ಬೆಳಗಾವಿ -ಬುದ್ಧಿಮಾಂದ್ಯೆ ಯುವತಿ ಮೇಲೆ ವ್ಯಕ್ತಿಯಿಂದ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೆಳಗಾವಿಯ ಕಾಕತಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಳಗಾವಿ ತಾಲೂಕಿನ ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಪೋಷಕರು ಜಮೀನಿಗೆ ಹೋಗಿದ್ದ ವೇಳೆ ಸಮಯ ಸಾಧಿಸಿ ಮನೆಗೆ ನುಗ್ಗಿರುವ ಕಾಮುಕ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾಗ,ಯುವತಿ ಚೀರಾಟ ಕೂಗಾಟ ನಡೆಸಿದ ತಕ್ಷಣವೇ ಮನೆ ಒಳಗೆ ಹೋಗಿರುವ ಯುವತಿಯ ಚಿಕ್ಕಪ್ಪ,ಕಾಮುಕನನ್ನು ಹಿಡಿದು ಥಳಿಸಿದ್ದಾನೆ.ಬಳಿಕ ಪ್ರಜ್ಞೆ ತಪ್ಪಿ ಬಿದ್ದು ಕಾಮುಕ ನಾಟಕವಾಡಿದ್ದಾನೆ.ಈ ವೇಳೆ ಯುವತಿಯ ಚಿಕ್ಕಪ್ಪನ ಕೈಯಿಂದ ಸಿನಿಮೀಯ ರೀತಿಯಲ್ಲಿ ಆರೋಪಿ ಪರಾರಿಯಾಗಿದ್ದ.
ತಕ್ಷಣವೇ ಯುವತಿ ಜೊತೆಗೆ ಕಾಕತಿ ಠಾಣೆಗೆ ಆಗಮಿಸಿದ ಪೋಷಕರು, ಸಂಬಂಧಿಗಳು, ಪೋಲೀಸರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಅಲರ್ಟ್ ಆದ ಬೆಳಗಾವಿ ಗ್ರಾಮೀಣ ವಿಭಾಗದ ಪೊಲೀಸರು,ಶೋಧ ಕಾರ್ಯ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಬೆಳಗಾವಿಯ ಕಾಕತಿ ಠಾಣೆಗೆ ಡಿಸಿಪಿ ಸ್ನೇಹಾ ಭೇಟಿ,ಘಟನೆ ಕುರಿತು ಸಂಬಂಧಿಕರಿಂದ ಮಾಹಿತಿ ಪಡೆದಿದ್ದಾರೆ.ಆರೋಪಿ ವಿರುದ್ಧ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ

