ಖಾನಾಪೂರ- ಹೊರಗಡೆ, ಜಿಟಿ ಜಿಟಿ ಮಳೆ,ಗಾಳಿ, ಚಳಿಯಲ್ಲಿ ಅವರು ಮನೆಯಲ್ಲಿ ಗಾಢ ನಿದ್ರೆಯಲ್ಲಿದ್ದರು. ಗೋಡೆ ಬಿರುಕು ಬಿಡುವ ಶಬ್ದವಾಯಿತು ಇದನ್ನು ಕೇಳಿದ ಮನೆಯ ಯಜಮಾನ ನಿದ್ದೆಯಿಂದ ಎದ್ದು ಮನೆಯಲ್ಲಿ ಮಲಗಿದವರನ್ನು ಎಬ್ಬಿಸಿ ಹೊರಗೆ ಹಾಕುವದಷ್ಟೇ ತಡ ಮನೆಯ ಗೋಡೆ ಕುಸಿದು ಬಿದ್ದಿತು. ಮನೆಯ ಯಜಮಾನನ ಸಮಯ ಪ್ರಜ್ಞೆಯಿಂದಾಗಿ ದೊಡ್ಡ ಅನಾಹುತವೇ ತಪ್ಪಿದೆ.
ಧಾರಾಕಾರ ಸುರಿಯುತ್ತಿರುವ ಮಳೆಗೆ ಮನೆ ಗೊಡೆ ಕುಸಿತ ಸ್ವಲ್ಪದರಲ್ಲಿ ಕುಟುಂಬಸ್ಥರು ಬಚಾವಾಗಿದ್ದಾರೆ.ಈ ಘಟನೆ ನಡೆದಿದ್ದು,ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನಲ್ಲಿ
ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಹಲವಾರು ಮನೆಗಳು ಬಿದ್ದಿವೆ ಆದರೆ ಯಾವುದು ಪ್ರಾಣಹಾನಿ ಸಂಭವಿಸಿಲ್ಲ. ಬೀಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗೋಲಿಹಳ್ಳಿ (ಹೊಸಟ್ಟಿ) ಗ್ರಾಮದ ಶಿವಪ್ಪಾ ನಿಂಗಪ್ಪಾ ಕಮತಗಿ ಎಂಬುವವರಿಗೆ ಸೇರಿದ ಮನೆ ಗೋಡೆ ಕುಸಿದು ಬಿದ್ದಿದೆ ಮನೆಯಲ್ಲಿ ಮಲಗಿದ್ದ ಎಲ್ಲರೂ ಸುರಕ್ಷಿತವಾಗಿದ್ದಾರೆ.
ರಾತ್ರಿ ಒಂದು ಗಂಟೆ ಸುಮಾರಿಗೆ ಎಲ್ಲರೂ ಮಲಗಿದ್ದಾಗ ಈ ಘಟನೆ ಸಂಭವಿಸಿದೆ. ಗೋಡೆ ಬೀಳುವ ಸೂಚನೆ ಅರಿತು ಈ ಕುಟುಂಬದ ಒಬ್ಬ ವ್ಯಕ್ತಿ ಎಲ್ಲರನ್ನೂ ಎಬ್ಬಿಸಿ ಹೋರಿಗೆ ಕರೆತಂದಿದ್ದಾರೆ. ಹೀಗಾಗಿ ದೋಡ್ಡ ಅನಾಹುತ ತಪ್ಪಿ ಎಲ್ಲರು ಸುರಕ್ಷಿತವಾಗಿದ್ದಾರೆ. ಆದರೆ ಮನೆಯಲ್ಲಿರುವ ಪಾತ್ರೆ ಪಗಡೆ ಕಾಳು ಇನ್ನಿತರ ವಸ್ತುಗಳು ಧ್ವಂಸವಾಗಿವೆ.
ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಹಾಗೂ ಸರ್ಕಲ್ ಅವರು ಬಂದು ಪರಿಸಿಲನೆ ನಡೆಸಿ ಕುಟುಂಬಕ್ಕೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿಕೋಟ್ಟು. ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಬರವಸೆ ಕೋಟ್ಟಿದ್ದಾರೆ.