ಬೆಳಗಾವಿ- ಮಹಾರಾಷ್ಟ್ರದಿಂದ ಅಕ್ರಮವಾಗಿ ಬೆಳಗಾವಿ ಗಡಿ ಪ್ರವೇಶಿಸಿದ 19 ಜನರ ವಿರುದ್ಧ ಕೇಸ್ ಹಾಕಲಾಗಿದೆ. ಬೆಳಗಾವಿ ಜಿಲ್ಲೆ ಮೂಡಲಗಿ ಠಾಣೆಯಲ್ಲಿ 19 ಜನರ ವಿರುದ್ಧ ಕೇಸ್ ದಾಖಲಾಗಿದೆ.
ಅಕ್ರಮವಾಗಿ ಮೂಡಲಗಿಗೆ ಬಂದಿದ್ದ 33 ಜನರಿಗೆ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಲಾಕ್‌ಡೌನ್ ಮುನ್ನ ಕಬ್ಬು ಕಟಾವು ಮಾಡಲು ಕೊಲ್ಲಾಪುರಕ್ಕೆ ತೆರಳಿದ್ದರು, ಲಾಕ್‌ಡೌನ್ ಹಿನ್ನೆಲೆ ಕೆಲಸ ಇಲ್ಲದೇ ಪರದಾಡುತ್ತಿದ್ದ ಕೂಲಿಕಾರ್ಮಿಕರು, ಕಾಲ್ನಡಿಗೆಯಲ್ಲಿ ಮಹಾರಾಷ್ಟ್ರದ ಮೀರಜ್ ಗಡಿಯವರೆಗೆ ಆಗಮಿಸಿದ್ರು, ದಾಸಗಾಂವ – ಮಾಗಾಂವ – ಮೀರಜ್ ಮೂಲಕ ಕಳ್ಳದಾರಿಯಲ್ಲಿ ಗಡಿ ಪ್ರವೇಶ ಮಾಡಿದ್ದರು.
ಚೆಕ್‌ಪೋಸ್ಟ್ ಪಕ್ಕದ ಗದ್ದೆಗಳ ಮೂಲಕ ಬೆಳಗಾವಿ ಗಡಿ ಪ್ರವೇಶಿಸಿದ್ದರು ಪರಿಚಯಸ್ಥರಿಗೆ ಹೇಳಿ ಲಾರಿ ಬುಕ್ ಮಾಡಿದ್ದ ವಲಸಿಗ ಕಾರ್ಮಿಕರು ಗಡಿಯಿಂದ ಲಾರಿ ಮೂಲಕ ಮೂಡಲಗಿಗೆ ಆಗಮಿಸುತ್ತಿದ್ದಾಗ ಪೋಲೀಸರು ತಡೆದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ತಡೆದ ಮೂಡಲಗಿ ಪೊಲೀಸರು, ಬಳಿಕ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಎಲ್ಲರ ಆರೋಗ್ಯ ತಪಾಸಣೆ ಮಾಡಿ ಆರೋಗ್ಯ ತಪಾಸಣೆ ಮಾಡಿ 33 ಜನರಿಗೂ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಮಾಡಿದ್ದಾರೆ 33 ಜನರಿಗೆ ಯಾದವಾಡ ಗ್ರಾಮದ ಹೊರವಲಯದ ಹಾಸ್ಟೆಲ್‌ನಲ್ಲಿ ಸಾಂಸ್ಥಿಕ ಕ್ವಾರಂಟೈನ್