ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಇಂದು ಒಂದೇ ದಿನ 13 ಕೊರೊನಾ ಸೋಂಕು ಪತ್ತೆಯಾಗಿವೆ. 13 ಜನರ ಪ್ರಾಥಮಿಕ ಸಂಪರ್ಕದಲ್ಲಿದ್ದ 33 ಜನರಿಗೆ ಕೊಕಟನೂರಿನಲ್ಲಿ ಕ್ವಾರಂಟೈನ್ ಮಾಡುವಾಗ ಅಲ್ಲಿಯ ಜನ ತೀವ್ರ ವಿರೋಧ ವ್ಯೆಕ್ತ ಪಡಿಸಿದ್ದಾರೆ.
ತಮ್ಮ ಊರಲ್ಲಿ ಕ್ವಾರಂಟೈನ್ ಮಾಡಬೇಡಿ ಎಂದು ಕೊಕಟನೂರು ಗ್ರಾಮಸ್ಥರು ಒತ್ತಾಯಿಸಿ ಪ್ರತಿಭಟಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಘಟನೆ ನಡೆದಿದ್ದು , ಕೊರೊನಾ ಶಂಕಿತರನ್ನು ತಮ್ಮ ಊರಲ್ಲಿ ಕ್ವಾರಂಟೈನ್ ಮಾಡಬೇಡಿ ಎಂದು ಗ್ರಾಮಸ್ಥರ ಒತ್ತಾಯಿಸಿ ನಮ್ಮ ಊರಲ್ಲಿ ಕ್ವಾರಂಟೈನ್ ಮಾಡಬೇಡಿ ಎಂದು ಪಟ್ಟು ಹಿಡಿದಿದ್ದಾರೆ.