ಡಿಸಿಎಂ ಸವದಿ ಕ್ಷೇತ್ರದಲ್ಲಿ ಹೈ ಟೆನಶ್ಯನ್
ಬೆಳಗಾವಿ-
ಡಿಸಿಎಂ ಲಕ್ಷ್ಮಣ ಸವದಿ ಕ್ಷೇತ್ರದಲ್ಲಿ ಅಧಿಕಾರಿಗಳ ಮಹಾಯಡವಟ್ಟು, ಮಾಡಿಕೊಂಡಿದ್ದಾರೆ.
ಅಥಣಿ ತಹಶಿಲ್ದಾರ ಬೇಜವಾಬ್ದಾರಿಗೆ ನಾಲ್ಕು ಗ್ರಾಮಗಳಿಗೆ ಸಂಕಷ್ಟ ಎದುರಿಸುವಂತಾಗಿದೆ.
ಕೊರೊನಾ ಪರೀಕ್ಷಾ ವರದಿ ಬರುವ ಮುನ್ನವೇ ಕ್ವಾರಂಟೈನ್ ನಲ್ಲಿದ್ದವರ ಬಿಡುಗಡೆ ಮಾಡಲಾಗಿದೆ.
ಹದಿನಾಲ್ಕು ದಿನ ಕ್ವಾರಂಟೈನ್ ಪೂರ್ಣಗೊಳಿಸಿದ್ದಕ್ಕೆ ಶಂಕಿತರನ್ನು ಬಿಡುಗಡೆ ಮಾಡಲಾಗಿದ್ದು
*ಬಿಡುಗಡೆಯಾದ ಹದಿಮೂರು ಜನರಿಗೆ ಇಂದು ಕೊರೊನಾ ಸೋಂಕು ದೃಢವಾಗಿದೆ.
ಯಾರಲ್ಲೂ ರೋಗದ ಗುಣಲಕ್ಷಣಗಳು ಕಾಣಿಸದ ಹಿನ್ನಲೆ ಮನೆಗೆ ಮರಳಿದ್ದರು,
ಮೇ.6ರಂದು ಜಾರ್ಖಂಡ್ ನಿಂದ ಅಥಣಿಗೆ ಬಂದಿದ್ದ 44 ಜನ.ಮೇ.6 ರಿಂದ ಮೇ.20ರ ವರೆಗೆ ಹದಿನಾಲ್ಕು ದಿನಗಳ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದರು.
ಮೇ.20ರಂದು ಅವರ ಮನೆಗೆ ತೆರಳಿದ್ದ ಕ್ವಾರಂಟೈನಿಗಳು.
ಈ ಪೈಕಿ ಇಂದು 13ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ.
ಬೆಳಗ್ಗೆ ಹನ್ನೊಂದು ಗಂಟೆಗೆ ಮನೆಯಲ್ಲಿದ್ದ ಎಲ್ಲರನ್ನ ಶಿಪ್ಟ್ ಮಾಡಿದ ಆರೋಗ್ಯ ಅಧಿಕಾರಿಗಳು.
ಇಂದು ಬೆಳಗ್ಗೆ ವರೆಗೂ ಊರಲ್ಲಿ ಓಡಾಡಿಕೊಂಡಿದ್ದ ಹದಿಮೂರು ಜನ ಸೊಂಕಿತರನ್ನು ಈಗ ಮತ್ತೆ ಐಸೋಲೇಟ್ ಮಾಡಲಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ 8, ಬೆಳವಕ್ಕಿ ಗ್ರಾಮದ 1, ನಂದಗಾಂವ 3, ಝುಂಜರವಾಡ 1, ನಾಲ್ಕು ಗ್ರಾಮದಲ್ಲಿ 13 ಪ್ರಕರಣ ಪತ್ತೆ.
ಮೇ.20ಕ್ಕೆ ಊರಿಗೆ ತೆರಳಿದ ಬಳಿಕ ತಮ್ಮ ಊರು ಸೇರಿದಂತೆ ಅಥಣಿ ತಾಲೂಕಿನಲ್ಲಿ ಮಾರ್ಕೆಟ್ ಹಾಗೂ ಅಕ್ಕಪಕ್ಕದ ಗ್ರಾಮದಲ್ಲಿ ಓಡಾಡಿದ್ದರು,
ನೆರೆ ಹೊರೆಯ ಗ್ರಾಮಗಳಿಗೆ ಹಾಗೂ ಅಕ್ಕಪಕ್ಕದ ಗ್ರಾಮಸ್ಥರಿಗೆ ಸಂಕಷ್ಟ ಎದುರಾಗಿದೆ.
ಅಥಣಿ ತಹಶಿಲ್ದಾರ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ತೆಕ್ತಪಡಿಸಿದ್ದಾರೆ.