ಬೆಳಗಾವಿ- ಗೋಕಾಕಿನಲ್ಲಿ ನೀರು ನುಗ್ಗಿದೆ ಮನೆಯೂ ಮುಳುಗುತ್ತದೆ ಎಂದು ತಿಳಿದುಕೊಂಡ ಮನೆಯ ಯಜಮಾನನಿಗೆ ಶಾಕ್ ಆಗಿ,ಹಾರ್ಟ್ ಅಟ್ಯಾಕ್ ಆಗಿ,ಆತನ ಅಂತ್ಯ ಸಂಸ್ಕಾರ ಮುಗಿಸಿ ಕುಟುಂಬಸ್ಥರು ಮನೆಗೆ ಬರುವಷ್ಟರಲ್ಲಿ ಮನೆಯೂ ನೀರಿನಲ್ಲಿ ಮುಳುಗಿ ಮೃತ ಯಜಮಾನನ ಕುಟುಂಬಸ್ಥರು ಕಾಳಜಿ ಕೇಂದ್ರಕ್ಕೆ ಶಿಪ್ಟ್ ಆದ ಘಟನೆ ಗೋಕಾಕಿನಲ್ಲಿ ನಡೆದಿದೆ.
ಮನೆಗೆ ನೀರು ನುಗ್ಗಿದ ವಿಚಾರ ಕೇಳಿ,ಹೃದಯಾಘಾತದಿಂದ ಮನೆ ಯಜಮಾನ ಸಾವನ್ನಪ್ಪಿದ್ದಾನೆ.ನಿನ್ನೆ ಸಂಜೆ ಮನೆಗೆ ನೀರು ಬರುವ ವಿಚಾರ ತಿಳಿದು ದಶರಥ ಬಂಡಿ(80) ನಿನ್ನೆ ಸಂಜೆ ಮೃತಪಟ್ಟಿದ್ದರು.ನಿನ್ನೆ ರಾತ್ರಿ ಅಂತ್ಯಸಂಸ್ಕಾರ ಮಾಡಿ ಮನೆಗೆ ಹೋಗುವಷ್ಟರಲ್ಲಿ ಯಜಮಾನನ ಮನೆಯೂ ನೀರಿನಲ್ಲಿ ಮುಳುಗಿತ್ತು.ರಾತ್ರೋರಾತ್ರಿ ಉಟ್ಟಬಟ್ಟೆಯಲ್ಲೇ ಹೊರ ಬಂದ ಮೃತನ ಕುಟುಂಬಸ್ಥರು,ಈಗ ಸರ್ಕಾರದ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.
ಗೋಕಾಕ್ ನಗರದ ಉಪ್ಪಾರ ಗಲ್ಲಿ ನಿವಾಸಿ ಆಗಿದ್ದ ಅವರು,ಮಕ್ಕಳು, ನಾಯಿ ಮರಿಗಳ ಜೊತೆಗೆ ಕಾಳಜಿ ಕೇಂದ್ರಕ್ಕೆ ಶಿಪ್ಟ್ ಆಗಿದ್ದಾರೆ.ಮನೆಯ ಯಜಮಾನ ಕಳೆದುಕೊಂಡ ಅಯೋಮಯವಾದ ಕುಟುಂಬದ ಸ್ಥಿತಿ,ಈಗ ಮನೆ ಮುಳುಗಿ ಸಾಮಾಗ್ರಿ ಸಮೇತ ಬದುಕು ಕೊಚ್ಚಿ ಹೋದಂತಾಗಿದೆ.ಹದಿನೇಳು ಜನರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.ಗೋಕಾನಲ್ಲಿ ಉದ್ಭವಿಸಿದ ಜಲ ಸಂಕಟ ಗೋಕಾಕಿನ ಜನರ ಪಾಲಿಗೆ ಪ್ರಾಣ ಸಂಕಟವಾಗಿದ್ದು ನಿಜ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ