ಬೆಳಗಾವಿ- ರಾಯಬಾಗದ ಕುಡಚಿ ಸೇತುವೆ ಮುಳುಗಡೆಯಾಗಿದೆ.ಈ ಸೇತುವೆಯ ಪಕ್ಕದಲ್ಲೇ ಇರುವ ಜಾಕವೇಲ್ ರಿಪೇರಿ ಮಾಡಲು ಹೆಸ್ಕಾಂ ಸಿಬ್ಬಂದಿ ಮತ್ತು ಇತರರು ಬೋಟ್ ನಲ್ಲಿ NDRF ತಂಡದ ಜೊತೆ ಹೋಗುತ್ತಿರುವಾಗ ಅವಘಡ ಸಂಭವಿಸಿದ್ದು ದೊಡ್ಡ ಅನಾಹುತವೇ ತಪ್ಪಿದಂತಾಗಿದೆ.
ಕೃಷ್ಣಾ ನದಿಯಲ್ಲಿ NDRF ಬೋಟ್ ಪಲ್ಟಿಯಾಗಿ ಭಾರಿ ಅನಾಹುತ ತಪ್ಪಿದೆಕೃಷ್ಣಾ ನದಿಗೆ ಭಾರಿ ಪ್ರಮಾಣದ ನೀರು ಹಿನ್ನಲೆ ಪಟ್ಟಣಕ್ಕೆ ನೀರು ಕೊಡುವ ಜಾಕವೆಲ್ ಮುಳುಗಡೆಯಾಗಿದೆ.ಈಜಾಕವೆಲ್ ದುರಸ್ತಿಗೆ ಎಂದು ಎಂದು ತೆರಳಿದ್ದ NDRF. ಬೋಟ್ ಪಲ್ಟಿಯಾಗಿದೆNDRF ಸಿಬ್ಬಂದಿ ಜೋತೆಗೆ ಸ್ಥಳೀಯ ಲೈನಮನ್ ಹಾಗೂ ಓರ್ವ ವಾಟರ್ ಮನ್ ಕೂಡ ತೆರಳಿದ್ದರು,ಎಲ್ಲರಿಗೂ ಲೈಫ್ ಜಾಕೆಟ್ ಹಾಕಿದ ಹಿನ್ನಲೆ ಎಲ್ಲರೂ ಸೇಪ್ ಆಗಿದ್ದಾರೆ.
ಬೋಟ್ ಪಲ್ಟಿಯಾಗಿ ನೀರಿನಲ್ಲಿ ಹರಿದುಹೋಗುತ್ತಿದ್ದ ಲೈನ್ ಮೆನ್ ಹಾಗೂ ವಾಟರ್ ಮೆನ್ ಇಬ್ಬರೂ ಸಹ,ನದಿಯ ದಡದಲ್ಲಿ ಇರುವ ಮರ ಹಿಡಿದುಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ.ಒಟ್ಟು 6 ಜನರಿದ್ದ NDRF ಬೋಟ್ ಪಲ್ಟಿಯಾದರೂ ಸಹಅದೃಷ್ಟವಶಾತ್ ದೊಡ್ಡ ಅನಾಹುತವೆ ತಪ್ಪಿ ಹೋಗಿದೆ.ಕೂಡಲೇ ಎರಡನೇ ಬೋಟ ಮೂಲಕ ತೆರಳಿ NDRF ತಂಡ ಎಲ್ಲರನ್ನು ರಕ್ಚಿಸಿದೆ.ಜಾಕವೆಲ್ ಕೆಳಗೆ ಸಿಲುಕೊಂಡಿದ್ದ ಬೋಟ್ ಕೂಡ ಈಗ ನದಿ ತೀರಕ್ಕೆ ತಲುಪಿದೆ