ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತ್ರತ್ವದಲ್ಲಿ ನಡೆಯುವ ಈ ಪಾದಯಾತ್ರೆ ಬಿಜೆಪಿ ಪೂರಕವಾಗಬಹುದೋ ? ಕಾಂಗ್ರೆಸ್ಸಿಗೆ ಮಾರಕ ವಾಗಬಹುದೋ ಅನ್ನೋದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ.ಏಕೆಂದರೆ ಬಿಜೆಪಿಯ ಹಿರಿಯ ನಾಯಕ ಬಸನಗೌಡ ಯತ್ನಾಳ ಅವರು ಬಿಜೆಪಿಯ ಈ ಪಾದಯಾತ್ರೆಯ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.ವಿಜಯೇಂದ್ರ ಮತ್ತು ಡಿಕೆಶಿ ನಡುವೆ ಒಳ ಒಪ್ಪಂದ ಆಗಿದೆ .ಸಿಎಂ ಸಿದ್ರಾಮಯ್ಯ ನವರನ್ನು ಕೆಳಗಿಳಿಸಿ ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡಿ ಉಪಕಾರ ತೀರಿಸಲು ವಿಜಯೇಂದ್ರ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಯತ್ನಾಳಗೌಡ್ರು ಇತ್ತೀಚಿಗಷ್ಡೆ ಗಂಭೀರ ಆರೋಪ ಮಾಡಿದ್ದರು.
ವಾಲ್ಮೀಕಿ ಹಗರಣದ ಸಿಬಿಐ ತನಿಖೆಗೆ ಆಗ್ರಹಿಸಿ,ಬಿಜೆಪಿ ಹೈಕಮಾಂಡ್ ಅನುಮತಿ ಪಡೆದು ನಾವೂ ಕೂಡಲ ಸಂಗಮದಿಂದ ಬಳ್ಳಾರಿಯವರೆಗೆ ಶೀಘ್ರದಲ್ಲೇ ಪಾದಯಾತ್ರೆ ಮಾಡುತ್ತೇವೆ ಎಂದು ಬಸನಗೌಡ ಯತ್ನಾಳ ಮತ್ತು ಬೆಳಗಾವಿಯ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಬೆಳಗಾವಿಯ ಅಥಣಿಯಲ್ಲಿ ಮಾದ್ಯಮಗಳ ಎದುರು ಘೋಷಣೆ ಮಾಡಿದ್ದರು.
ಈ ಎಲ್ಲ ಬೆಳಗವಣಿಗಗಳ ನಡುವೆ ನಾಳೆಯಿಂದ ಬಿಜೆಪಿಯ ಪಾದಯಾತ್ರೆ ಶುರುವಾಗಲಿದೆ. ಮೂಡಾ ಹಗರಣ ಮುಂದಿಟ್ಡುಕೊಂಡು ಬಿಜೆಪಿ ಸಿಎಂ ಸಿದ್ರಾಮಯ್ಯ ರಾಜೀನಾಮೆಗೆ ಪಟ್ಟು ಹಿಡಿಯಲಿದ್ದು, ಈ ಪಾದಯಾತ್ರೆ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಕಾರಣವಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ಸಿಎಂ ಸಿದ್ರಾಮಯ್ಯ ನವರನ್ನು ಕೆಳಗಿಳಿಸುವದು ಸುಲಭದ ಮಾತಲ್ಲ, ಆದ್ರೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪಾದಯಾತ್ರೆಯನ್ನು ಯಶಸ್ವಿಗೊಳಿಸಲು ಎಲ್ಲ ರೀತಿಯ ತಂತ್ರಗಳನ್ನು ರೂಪಿಸಿ ತಂತ್ರಗಾರಿಕೆಯ ತಯಾರಿ ಮಾಡಿಕೊಂಡಿದ್ದಾರೆ.
ಬಸನಗೌಡ ಯತ್ನಾಳ ಮತ್ತು ರಮೇಶ್ ಜಾರಕಿಹೊಳಿ ಅವರ ಜೋಡಿ ಯಾವ ತಂತ್ರ ರೂಪಿಸಿದ್ದಾರೆ ಎನ್ನುವದು ಇನ್ನುವರೆಗೆ ಬಹಿರಂಗವಾಗಿಲ್ಲ, ಆದ್ರೆ ಈ ಜೋಡಿ ಏನಾದ್ರು ಮೋಡಿ ಮಾಡುವ ಪ್ರಯತ್ನದಲ್ಲಿದೆ.ಇವರ ಮುಂದಿನ ನಡೆ ಯಾವ ಕಡೆ ? ಎನ್ನುವದು ನಿಗೂಢವಾಗಿದೆ.ಆದ್ರೆ ಈ ಜೋಡಿ ಸುಮ್ಮನಿರುವ ಜೋಡಿ ಅಲ್ಲ ಏನಾದ್ರೂ ಮಾಡುತ್ತದೆ ಎನ್ನುವ ಚರ್ಚೆಗಳು ಈಗ ಶುರುವಾಗಿದೆ.
ಬಿಜೆಪಿ ಪಾದಯಾತ್ರೆಯಂದ ಬಿಜೆಪಿಗೆ ಲಾಭ ಆಗುತ್ತದೆಯೋ ಅಥವಾ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆಯೋ ಅನ್ನೋದನ್ನು ಕಾಯ್ದು ನೋಡಬೇಕಾಗಿದ್ದು ನಾಳೆ ನಡೆಯಲಿರುವ ಬಿಜೆಪಿ ಪಾದಯಾತ್ರೆಯಲ್ಲಿ ಬಸನಗೌಡ ಯತ್ನಾಳ ಮತ್ತು ರಮೇಶ್ ಜಾರಕಿಹೊಳಿ ಭಾಗವಹಿಸುತ್ತಾರೆ ಇಲ್ಲವೋ ಎನ್ನುವ ವಿಚಾರ ಈಗ ತೀವ್ರ ಕುತೂಹಲ ಕೆರಳಿಸಿದೆ.
ಪಾದಯಾತ್ರೆಯ ಪರಿಣಾಮ ಏನೇ ಆಗಲಿ ಪರಿಣಾಮದ ಪ್ರಭಾವ ಬೆಳಗಾವಿ ಜಿಲ್ಲೆಗೆ ಸುತ್ತುಕೊಳ್ಳುವದರಲ್ಲಿ ಸಂದೇಹವಿಲ್ಲ.