Breaking News

ಸಿದ್ರಾಮಯ್ಯನವರ ಬಗ್ಗೆ ದಾಖಲೆ ಕೊಟ್ಟಿದ್ದು ಡಿ.ಕೆ.ಶಿವಕುಮಾರ್…!! HDK ಬಾಂಬ್..!!

ಬೆಂಗಳೂರು-ಬೆಂಗಳೂರು TO ಮೈಸೂರು ಸಿಎಂ ಸಿದ್ರಾಮಯ್ಯ ನವರ ರಾಜಿನಾಮೆಗೆ ಆಗ್ರಹಿಸಿ ಬಿಜೆಪಿಯ ಪಾದಯಾತ್ರೆ ಆರಂಭವಾಗಿದೆ.ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ HD ಕುಮಾರಸ್ವಾಮಿ, ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದು ಸಿದ್ರಾಮಯ್ಯ ನವರ ವಿರುದ್ಧ ದಾಖಲೆ ಕೊಟ್ಟಿದ್ದೇ ಡಿಕೆ ಶಿವಕುಮಾರ್ ಸಿದ್ರಾಮಯ್ಯನವರಿಗೆ ಕೈ ಹಚ್ಚಿದ್ರೆ ಹುಷಾರ್ ಎನ್ನುವ ಡ್ರಾಮಾ ಬೇಡ ಈ ಎಲ್ಲ ನಾಟಕ ಬೇಡ ಇನ್ನೂ ಏನೇನ್ ನಾಟಕ ಮಾಡ್ತೀರಾ ಎಂದು ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಸಿದ್ರಾಮಯ್ಯನವರನ್ನು ಎಷ್ಟು ಬೇಗ ಇಳಸ್ತೀನಿ ಅಂತಾ ಸಿದ್ರಾಮಯ್ಯ ನವರ ವಿರುದ್ಧ ಸಾರ್ವಜನಿಕವಾಗಿ ದಾಖಲೆಗಳನ್ನು ಕೊಟ್ಟಿದ್ದು ಡಿ.ಕೆ ಶಿವಕುಮಾರ್ ನೀವೇ ಅಲ್ಲವೇ ? ನಿನ್ನೆ ಸಿದ್ರಾಮಯ್ಯನವರ ಪರವಾಗಿ ನಿಂತು, ವಿಜಯೇಂದ್ರ ಅವರನ್ನು ಏಕವಚನದಲ್ಲಿ ನಿಂದಿಸಿ ನಾಟಕ ಮಾಡ್ತೀರಾ ಈ ನಾಟಕ ನಮ್ಮ ಮುಂದೆ ನಡೆಯೋದಿಲ್ಲ. ಮುಂದಿನ ಹತ್ತು ವರ್ಷದ ವರೆಗೆ ನಾವೇ ಅಧಿಕಾರದಲ್ಲಿ ಇರ್ತೀವಿ ಅಂತಾ ಸಿಡಿ ಶಿವು ಹೇಳಿದ್ದಾರೆ. ಹತ್ತು ವರ್ಷ ಅಲ್ಲ ಹತ್ತು ತಿಂಗಳು ಇದ್ದು ತೋರಿಸಿ, ಸಿಎಂ ಆಗಲು ಕಾಂಗ್ರೆಸ್ಸಿನಲ್ಲಿ ಬಹಳಷ್ಟು ಜನ ಟಾವೆಲ್ ಹಾಕಿ ಕುಳುತ್ತಿದ್ದಾರೆ. ನಿಮ್ಮ ನಾಟಕ ಜನರಿಗೆ ಗೊತ್ತಾಗಿದೆ. ನಮ್ಮ ಹೋರಾಟ ಇರೋದು ಕಾಂಗ್ರೆಸ್ ವಿರುದ್ಧವೇ ಹೊರತು ಗ್ಯಾರಂಟಿಗಳ ವಿರುದ್ದ ಅಲ್ಲ ಮೂರು ತಿಂಗಳಾಯ್ತು ಗೃಹಲಕ್ಷ್ಮೀ ಹಣ ಬಿಡುಗಡೆ ಆಗಿಲ್ಲ ಕೇವಲ ಸಿದ್ರಾಮಯ್ಯ ಅಷ್ಟೇ ಅಲ್ಲ ಕಾಂಗ್ರೆಸ್ ಪಕ್ಷವೇ ಈ ರಾಜ್ಯದಿಂದ ತೊಲಗಬೇಕು ಎಂದು HD ಕುಮಾರಸ್ವಾಮಿ ಡಿ.ಕೆ ಶಿವಕುಮಾರ್ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.

ನಿಮ್ಮ ಪಾಪದ ಕೊಡ ತುಂಬಿದೆ.ನೀವು ಹತಾಶ ರಾಗಿದ್ದೀರಾ ಅಯ್ಯೋ ಅಯ್ಯೋ ನಾನು ಸಿದ್ರಾಮಯ್ಯನವರ ಪರ ಅಂತಾ ನಿಮ್ಮ ನಾಟಕ ಸಾಕು ಉಪ ಮುಖ್ಯಂತ್ರಿಗಳೇ ಬಿಜೆಪಿ ಮತ್ತು ಜೆಡಿಎಸ್ ದೋಸ್ತಿ ಗಟ್ಟಿಯಾಗಿದೆ.ನಮ್ಮ ನಡುವೆ ಬಿರುಕು ಹುಟ್ಟಿಸಲು ಸಾಧ್ಯವಿಲ್ಲ. ನಮ್ಮ ಪಾದಯಾತ್ರೆ ಯಶಸ್ವಿಯಾಗಿ ನಡೆಯುತ್ತದೆ ಎಂದು HD ಕುಮಾರಸ್ವಾಮಿ ಡಿ.ಕೆ ಶಿವಕುಮಾರ್ ಅವರ ವಿರುದ್ಧ ವಾಕ್ ಸಮರ ನಡೆಸಿದ್ದಾರೆ.

ಡಿಕೆಶಿಯದ್ದು ನಾವು ಬಿಚ್ಚಿಡುತ್ತೇವೆ

ನಮ್ಮ ಪಾದಯಾತ್ರೆ ತಡೆಯಲು ಕಾಂಗ್ರೆಸ್ ನಾಯಕರು ಬಿಡದಿಯಲ್ಲಿ ಪ್ರಶ್ನೆ ಮಾಡಿದ್ದಾರೆ. ಅದಾದ ಮೇಲೆ ಮುಂದೆಯೂ ಪ್ರಶ್ನೆ ಮಾಡುತ್ತಾರಂತೆ. ಮಾಡಲಿ, ಅವರಿಗೆ ತಕ್ಕ ಉತ್ತರ ಕೊಡುತ್ತೇವೆ. ಅವರು ಕೇಳಿರುವ ಪ್ರಶ್ನೆಗಳಿಗೆ ಬಿಡದಿ, ರಾಮನಗರದಲ್ಲಿ ಉತ್ತರ ಕೊಡುತ್ತೇನೆ” ಎಂದು ಹೇಳಿದರು.

ಹಿಂದುಳಿದ ವರ್ಗಗಳ ನಾಯಕರು ಎರಡನೇ ಬಾರಿ ಮುಖ್ಯಮಂತ್ರಿ ಆಗಿರುವುದಕ್ಕೆ ಕೆಲವರಿಗೆ ಹೊಟ್ಟೆ ಉರಿಯಿಂದ ಎನ್ನುತ್ತಾರೆ ಇವರು. ಒಳ್ಳೆಯ ಕೆಲಸ ಮಾಡಿದರೆ ಯಾರಿಗೆ ಹೊಟ್ಟೆ ಉರಿ ಬರುತ್ತದೆ? ಸುಖಾಸುಮ್ಮನೆ ಜನರ ಗಮನ ಬೇರೆಡೆಗೆ ಸೆಳೆಯಲು ನಾನು ಹಿಂದುಳಿದವನು, ಅದಕ್ಕೆ ಹೊಟ್ಟೆ ಉರಿ ಎಂದು ನಾಟಕ ಮಾಡುತ್ತಿದ್ದಾರೆ” ಎಂದು ಟೀಕಿಸಿದರು.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *