Breaking News

ಬಾಂಗ್ಲಾಂದಿಂದ ಬೆಳಗಾವಿ ತಲುಪಿದ ವಿಧ್ಯಾರ್ಥಿ

ಬೆಳಗಾವಿ- ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರ ಕಳಕಳಿ,ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಅವರ ಪ್ರಯತ್ನ ಭಾರತ ಸರ್ಕಾರದ ಇಚ್ಛಾಶಕ್ತಿಯ ಪರಿಣಾಮವಾಗಿ ಬಾಂಗ್ಲಾ ದೇಶದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಬೆಳಗಾವಿಯ ವಿಧ್ಯಾರ್ಥಿ ಬೆಳಗಾವಿಗೆ ಸುರಕ್ಷಿತವಾಗಿ ತಲುಪಿದ್ದಾನೆ.

ಗಲಭೆ ಪೀಡಿತ ಬಾಂಗ್ಲಾದಿಂದ ಬಚಾವ್ ಆಗಿ ಬೆಳಗಾವಿಗೆ 25 ವೈದ್ಯಕೀಯ ವಿದ್ಯಾರ್ಥಿಗಳು ಸುರಕ್ಷಿತವಾಗಿ ಮರಳಿದ್ದಾರೆ.ಬೆಳಗಾವಿ ಡಿಸಿ ಮಹ್ಮದ್ ರೋಷನ್, ಎಂಪಿ ಜಗದೀಶ್ ಶೆಟ್ಟರ್‌ ನೆರವಿನಿಂದ ಈ ವಿಧ್ಯಾರ್ಥಿಗಳ ಪ್ರಯಾಣ ಸೇಫ್ ಆಗಿದೆ.ಬಾಂಗ್ಲಾದಿಂದ ಬೆಳಗಾವಿಗೆ ಬಂದ ವೈದ್ಯಕೀಯ ವಿದ್ಯಾರ್ಥಿ ನೇಹಲ್ ಸವಣೂರು ತಮ್ಮನ್ನು ಬೆಳಗಾವಿಗೆ ತಲುಪಿಸಿದ ಎಲ್ಲರಿಗೂ ಥ್ಯಾಂಕ್ಸ್ ಹೇಳಿದ್ದಾನೆ.

ಈ ಸಮಯದಲ್ಲಿ ಬಾಂಗ್ಲಾದಲ್ಲೇ ಇದ್ದಿದ್ರೆ ರೂಂನಲ್ಲಿ ಕೂಡಾಕಿ ಹಿಂಸೆ ನೀಡ್ತಿದ್ರು,ಬಾಂಗ್ಲಾದಲ್ಲಿನ ಹಿಂಸಾಚಾರದ ಭಯಾನಕ ಘಟನೆ ನೆನಪಿಸಿಕೊಂಡ ನೆಹಲ್,
ಗಲಭೆ ಪೀಡಿತ ಬಾಂಗ್ಲಾದೇಶದಲ್ಲಿ ಸಾಕಷ್ಟು ನೋವು ಅನುಭವಿಸಿದೇವು, ಎಲ್ಲ ಕಡೆಯೂ ಕರ್ಪ್ಯೂ ಇತ್ತು, ಊಟಕ್ಕೂ ಪರದಾಡಬೇಕಾಯಿತು,ಎರಡೇ ನಿಮಿಷದಲ್ಲಿ ತಿನ್ನೋಕೆ ಏನಾದರೂ ತಂದು ರೂಂ ಸೇರುತ್ತಿದ್ವಿ,ಲೇಡಿಸ್ ಹಾಸ್ಟೆಲ್ ಹತ್ರ ಸಮಸ್ಯೆ ಬಹಳಷ್ಟು ಇತ್ತು ಅಲ್ಲಿ ಊಟವೂ ಇರಲಿಲ್ಲ.ಹಿಂದೂಗಳನ್ನೇ ಬಾಂಗ್ಲಿಗರು ಟಾರ್ಗೆಟ್ ಮಾಡೋಕೆ ಶುರು ಮಾಡಿದ್ರು,ನೆಟ್ವರ್ಕ್ ಕೂಡ ಇರಲಿಲ್ಲ, ಪೋಷಕರ ಜೊತೆಗೆ ಮಾತನಾಡಲೂ ಆಗಲಿಲ್ಲ,ಬಾಂಗ್ಲಾದಲ್ಲಿ ನಾನೂ ಭಯಭೀತನಾಗಿದ್ದೆ, ಈಗಿನ ಪರಿಸ್ಥಿತಿ ‌ಇನ್ನೂ ಭಯಂಕರ ಇದೆ ಎಂದು ನೇಹಾಲ್ ಮಾದ್ಯಮಗಳ ಎದುರು ತನ್ನ ಅನುಭವ ಹಂಚಿಕೊಂಡಿದ್ದಾನೆ.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *