ಬೆಳಗಾವಿ- ನಿನ್ನೆ ರಾತ್ರಿ 8-30 ರ ಸುಮಾರಿಗೆ ಬೆಳಗಾವಿಯ ನಾವಗೆ ಗ್ರಾಮದ ಹದ್ದಿಯಲ್ಲಿರುವ ಸ್ನೇಹಂ ಕಾರ್ಖಾನೆಯ ಲಿಫ್ಟನಲ್ಲಿ ಶಾರ್ಟ್ ಸರ್ಕ್ಯುಟ್ ನಿಂದಾಗಿ ಹೊತ್ತಿದ ಬೆಂಕಿ ಇಡೀ ರಾತ್ರಿ ಹೊತ್ತಿ ಉರಿದು ಕಾರ್ಖಾನೆಯೇ ಸುಟ್ಟು ಭಸ್ಮವಾಗಿದೆ.ಇನ್ನುವರೆಗೆ ಬೆಂಕಿ ಸಂಪೂರ್ಣವಾಗಿ ಆರಿಲ್ಲ,ದೊಡ್ಡ ಪ್ರಮಾಣದ ಹೊಗೆ ಇನ್ನೂ ಬರುತ್ತಲೇ ಇದೆ.ಈ ಬೆಂಕಿ ಅವಘಡದಲ್ಲಿ ಕಾರ್ಮಿಕನೊಬ್ಬ ಬಲಿಯಾಗಿದ್ದಾನೆ ಎಂದು ಶಂಕಿಸಲಾಗಿದೆ.
ಸ್ನೇಹಂ ಕಾರ್ಖಾನೆಯಲ್ಲಿ ಇಲೆಕ್ಟ್ರಿಕಲ್ ವೈರಿಂಗ್ ನಲ್ಲಿ ಬಳಕೆ ಮಾಡುವ ಪ್ಲಾಸ್ಟೀಕ್ ಟೇಪ್ ತಯಾರಿಸಲಾಗುತ್ತಿತ್ತು. ಪ್ಲಾಸ್ಟಿಕ್ ವಸ್ತು ತಯಾರಿಸುವ ಕಾರ್ಖಾನೆ ಇದಾಗಿದ್ದರಿಂದ ಬೆಂಕಿಯನ್ನು ತ್ವರಿತಗತಿಯಲ್ಲಿ ಕಂಟ್ರೋಲ್ ಮಾಡಲು ಸಾಧ್ಯವಾಗಲೇ ಇಲ್ಲ. ಅವಘಡ ಸಂಭವಿಸಿದ ತಕ್ಷಣ, ಅಗ್ನಿಶಾಮಕ ದಳ ಸೇರಿದಂತೆ ಬೆಳಗಾವಿ ನಗರ ಪೋಲೀಸ್ ಆಯುಕ್ತ ಮಾರ್ಟೀನ್ ಇಬ್ಬರು ಡಿಸಿಪಿ, ಹಾಗೂ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಸೇರಿದಂತೆ ಪೋಲೀಸ್ ಅಧಿಕಾರಿಗಳ ತಂಡ ಇಡೀ ರಾತ್ರಿ ಬೆಂಕಿ ಆರಿಸುವ ಕಾರ್ಯಾಚರಣೆಯ ಮಾನೀಟರ್ ಮಾಡಿದ್ರು ಈ ಕಾರ್ಖಾನೆಯಲ್ಲಿ ಪ್ಲಾಸ್ಟಿಕ್ ಪಟ್ಟಿ ತಯಾರಿಸುವ ಕಚ್ಚಾ ವಸ್ತುವಿನ ದಾಸ್ತಾನು ಇದ್ದಿದ್ದರಿಂದ ಬೆಂಕಿ ಹತೋಟಿಗೆ ಬರಲು ಸಾಧ್ಯವಾಗಲಿಲ್ಲ
ಸ್ನೇಹಂ ಕಾರ್ಖಾನೆಯ ಲಿಫ್ಟ್ ನಲ್ಲಿದ್ದ ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ ಎಂದು ಶಂಕಿಸಲಾಗಿದೆ. ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿದ ತಕ್ಷದ ಅಲ್ಲಿದ್ದ ಎಲ್ಲ ಕಾರ್ಮಿಕರು ಹೊರಗೆ ಬಂದಿದ್ದಾರೆ ಆದ್ರೆ ಲಿಪ್ಟನಲ್ಲಿದ್ದ ಕಾರ್ಮಿಕನೊಬ್ಬನೇ ಸಿಲುಕಿದ್ದಾನೆ ಎಂದು ಶಂಕಿಸಲಾಗಿದೆ.
ಅಗ್ನಿಶಾಮಕ ದಳದಳ ಬೆಂಕಿ ಆರಿಸುವ ಕಾರ್ಯಾವರಣೆ ಮುಂದುವರೆಸಿದ್ದು ಎಲ್ಲ ಹಿರಿಯ ಅಧಿಕಾರಿಕೊಳು ಘಟನಾ ಸ್ಥಳದಲ್ಲೇ ಮೊಕ್ಕಾಂ ಮಾಡಿದ್ದಾರೆ.
ಕಾರ್ಖಾನೆಯಲ್ಲಿ ನಡೆದ ಈ ಬೆಂಕಿ ಅವಘಡದಲ್ಲಿ ಕೇವಲ ಒಬ್ಬ ಕಾರ್ಮಿಕ ಮಾತ್ರ ಜೀವ ಕಳೆದುಕೊಂಡಿದ್ದಾನೆ ಎಂದು ಜೇಳಲಾಗುತ್ತಿದೆ.