ಬೆಳಗಾವಿ- ನಂದಿ ಹಿಲ್ಸ್ ಎಂದ ತಕ್ಷಣ ನಮಗೆ ನೆನಪಿಗೆ ಬರೋದು ಮೈಸೂರು, ಆದ್ರೆ ಬೆಳಗಾವಿ ನಗರದ ಪಕ್ಕದಲ್ಲೇ ನಂದಿ ಹಿಲ್ಸ್ ಇದೆ. ಇಲ್ಲಿ ಹೆಸರಿಗೆ ಮಾತ್ರ ನಂದಿ ಹಿಲ್ಸ್ ಇಲ್ಲ. ಈ ಹಿಲ್ಸ್ ಮೇಲೆ ನಂದಿ ಮೂರ್ತಿಯೂ ಇದೆ.
ನಿಮಗೆ ಆಶ್ಚರ್ಯ ಅನಿಸಬಹುದು ಬೆಖಗಾವಿಯ ನಂದಿ ಹಿಲ್ಸ್ ಮೇಲೆ ನಿಂತ್ರೆ, ನವಿಲುಗಳ ಇಂಪಾದ ಕೂಗು ಕೇಳುತ್ತದೆ. ಈ ಹಿಲ್ಸ್ ಮೇಲೆ ನಿಂತು ನೋಡಿದ್ರೆ ಕೇವಲ ನಿಸರ್ಗ ಅಷ್ಟೇ ಅಲ್ಲ ಭೂಮಿಯ ಮೇಲಿನ ಸ್ವರ್ಗ ಅಲ್ಲಿ ಕಾಣಿಸುತ್ತದೆ ಬೆಳಗಾವಿಯ ನಂದಿ ಹಿಲ್ಸ್ ನಿಸರ್ಗದ ಸೌಂದರ್ಯ ಮೊದಲು ಇಲ್ಲಿಯ ಜನ ನೋಡಲೇಬೇಕು.
ಹಾಗಾದ್ರೆ ಈ ನಂದಿ ಹಿಲ್ಸ್ ಬೆಳಗಾವಿಯಲ್ಲಿ ಇರೋದು ಎಲ್ಲಿ ? ಎನ್ನುವ ಕುತೂಹಲ ಬೆಳಗಾವಿಯ ನಂದಿ ಹಿಲ್ಸ್ ಇರೋದು ಬೆಳಗಾವಿಯ ಸುವರ್ಣಸೌಧದ ಎದುರಿನ ಗುಡ್ಡದ ಮೇಲೆ, ಸುವರ್ಣಸೌಧದ ಎದುರು ಟೋಯಟಾ ಶೋರೂಂ ಇದೆ. ಅದರ ಪಕ್ಕದಲ್ಕೇ ಕುಂಡಸಕೊಪ್ಪ ಊರಿಗೆ ಹೋಗುವ ರಸ್ತೆ ಇದೆ.ಈ ರಸ್ತೆಯ ಮೂಲಕ ಕುಂಡಸಕೊಪ್ಪಗೆ ಹೋಗಬೇಕು ಕುಂಡಸಕೊಪ್ಪ ಊರು ದಾಟಿ ಒಂದು ಕಿ.ಮೀ ಹಾಗೇ ಮುಂದೆ ಹೋಗಿ ಬಲಕ್ಕೆ ತಿರುಗಿ ಎರಡು ಕಿ ಮೀ ನೇರವಾಗಿ ಹೋದ್ರೆ ನಂದಿ ಮೂರ್ತಿ ಕಾಣಿಸುತ್ತದೆ. ಇದೇ ನಂದಿ ಹಿಲ್ಸ್…..
ಈ ನಂದಿ ಹಿಲ್ಸ್ ಮೇಲೆ ನಂದಿ ಮೂರ್ತಿಯನ್ನು ಯಾರು ನಿರ್ಮಿಸಿದ್ದಾರೆ ಗೊತ್ತಿಲ್ಲ.ಆದ್ರೆ, ಈ ನಂದಿ ಬೆಳಗಾವಿ ಮಂದಿ ಬರಲಿ ಎಂದು ಕಾಯುತ್ತಿದೆ. ಶ್ರಾವಣ ಸೋಮವಾರಕ್ಕೆ ಎರಡೇ ದಿನ ಬಾಕಿ ಇದೆ, ಹಾಗಾದ್ರೆ ತಡ ಏಕೆ ಇದೇ ಶ್ರಾವಣ ಸೋಮವಾರದಂದು ನಂದಿ ಹಿಲ್ಸ್ ಗೆ ಭೇಟಿ ಕೊಡಿ, ನಂದಿ ಮೂರ್ತಿಯ ದರ್ಶನ ಪಡೆದು ಪುಣೀತರಾಗಿ…