ಬೆಳಗಾವಿ – ರಾಜಕಾರಣ ನಿಂತ ನೀರಲ್ಲ.ಅದು ಯಾರ ಉಹೆಗೂ ನಿಲುಕುವದಿಲ್ಲಿ,ಇತ್ತೀಚಿಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಪಾಲೀಟೀಕ್ಸ್ ಒಳಮರ್ಮವನ್ನು ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಿಲ್ಲ.
ರಾಜ್ಯಕ್ಕೆ ಮಲ್ಲಿಕಾರ್ಜುನ ಖರ್ಗೆ ಎಂಟ್ರಿ ಕೊಟ್ಟಿದ್ದಾರೆ. ಸಿಎಂ ಸಿದ್ರಾಮಯ್ಯ ಅವರಿಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ಕೊಟ್ಟಿದೆ. ಅಗಸ್ಟ್ 29 ರ ನಂತರ ಏನಾಗುತ್ತದೆ ಅನ್ನೋದು ಗೊತ್ತಿಲ್ಲ ಈ ಎಲ್ಲ ಬೆಳವಣಿಗೆಗಳ ನಡುವೆ ಸತೀಶ್ ಜಾರಕಿಹೊಳಿ ಅವರು ಡಿ.ಕೆ ಶಿವಕುಮಾರ್ ಅವರನ್ನು ಬೆಂಗಳೂರಿನ ಕುಮಾರಪಾರ್ಕನಲ್ಲಿ ಭೇಟಿಯಾಗಿ ಒಂದು ತಾಸು ಚರ್ಚೆ ನಡೆಸಿರುವ ವಿಚಾರ ಈಗ ಎಲ್ಲರ ಗಮನ ಸೆಳೆದಿದೆ.
ರಾಜ್ಯರಾಜಕಾರಣದಲ್ಲಿ ಗುಣಾಕಾರ ಆಗುತ್ತೋ ಭಾಗಾಕಾರ ಆಗುತ್ತೋ ಗೊತ್ತಿಲ್ಲ ಆದ್ರೆ ಯಾರಿಗೂ ಅರ್ಥವಾಗದ ರೀತಿಯಲ್ಲಿ ಒಂದಾದ ಬಳಿಕ ಇನ್ಮೊಂದು ಬೆಳವಣಿಗೆ ನಡೆಯುತ್ತಲೇ ಇವೆ.
ಸತೀಶ್ ಜಾರಕಿಹೊಳಿ ಮತ್ತು ಡಿಕೆ ಶಿವಕುಮಾರ್ ನಡುವೆ ರಾಜಕೀಯ ಸಂಬಂಧ ಚೆನ್ನಾಗಿದೆ. ಇಬ್ಬರ ನಡುವೆ ಮೆಲ್ನೋಟಕ್ಕೆ ಯಾವುದೇ ದ್ವೇಷ ಇಲ್ಲ.ಸಿಎಂ ಸಿದ್ರಾಮಯ್ಯ ಬದಲಾದರೆ ಮುಂದಿನ ಸಿಂ ಯಾರು ? ಎನ್ನುವ ಪ್ರಶ್ನೆ ಎದುರಾಗಿದೆ.ಮಲ್ಲಿಕಾರ್ಜುನ್ ಖರ್ಗೆ ಅವರು ದೆಹಲಿಯಿಂದ ತವರಿಗೆ ವಾಪಸ್ ಮರಳಿದ್ದಾರೆ. ಸಿದ್ರಾಮಯ್ಯ ಕಾನೂನು ಸಮರಕ್ಕೆ ಸಿದ್ಧತೆ ನಡೆಸಿದ್ದಾರೆ.ಏತನ್ಮಧ್ಯೆ ಡಿಕೆ ಶಿವಕುಮಾರ್ ಮತ್ತು ಸತೀಶ್ ಜಾರಕಿಹೊಳಿ ಇಬ್ಬರು ಚರ್ಚೆ ಮಾಡಿದ್ದಾರೆ.