ಬೆಳಗಾವಿ- ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಕ್ಯಾಶೀಯರ್ ಮ್ಯಾನೇಜರ್ ಆಗಿದ್ದ ಪ್ರದೋಶ್ ನನ್ನು ಇಂದು ಮಧ್ಯಾಹ್ನ 3-30 ಗಂಟೆ ಸುಮಾರಿಗೆ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ,ಮಾಡಲಾಗಿದೆ.
ಕೊಲೆ ಆರೋಪದ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿದ್ದ ನಟ ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿರುವ ಪೋಟೋ ವೈರಲ್ ಆದ ತಕ್ಷಣ ನ್ಯಾಯಾಲಯದ ಆದೇಶದ ಮೇರೆಗೆ ನಟ ದರ್ಶನ್ ಮತ್ತು ಅವನ ಜೊತೆಗಿದ್ದ ಎಲ್ಲ ಆರೋಪಿಗಳನ್ನು ಬೇರೆ,ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ನಟ ದರ್ಶನ್ ಬಳ್ಳಾರಿ ಜೈಲಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡೇ ಬಳ್ಳಾರಿ ಜೈಲಿಗೆ ಎಂಟ್ರಿ ಕೊಟ್ರೆ ,ದರ್ಶನ್ ಕ್ಯಾಶೀಯರ್ ಪ್ರದೋಶ್ ಬೆಳಗಾವಿಯ ಹಿಂಡಲಗಾ ಜೈಲಿಗೆ ಎಂಟ್ರಿಯಾಗಿದ್ದಾನೆ.
ಎರಡು ಬ್ಯಾಗ್ ಜೊತೆ ಹಿಂಡಲಗಾ ಜೈಲಿಗೆ ಬಂದಿದ್ದ ಪ್ರದೋಶ್ ನನ್ನು ಹಿಂಡಲಗಾ ಸಿಬ್ಬಂಧಿ ತಪಾಸಣೆ ಮಾಡಿದ್ರು,ತೂಕ ಹೆಚ್ಚಿದೆ ಎಂದು ಬ್ಲ್ಯಾಂಕೇಟ್ ರಿಜೆಕ್ಟ್ ಮಾಡಿದ್ರು ತೂತ್ ಪೇಸ್ಟ್ ವಾಸನೆ ನೋಡಿದ್ರು.ಸಿರಫ್ ತಮ್ಮ ಬಳಿ ಇಟ್ಕೊಂಡ್ರು ಡಾಕ್ಟರ್ ಸಲಹೆ ಪಡೆದು ಕೊಡ್ತೀವಿ ಅಂದ್ರು ಪ್ರದೋಶ್ ನನ್ನು ಫುಲ್ ಚಕ್ ಮಾಡಿ ಒಳಗೆ ಬಿಟ್ರು..
ಪ್ರದೋಶ್ ಈಗ ಹಿಂಡಲಗಾ ಕೈದಿ ನಂ 2894
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
