ಬೆಳಗಾವಿ- ಕಿತ್ತೂರು ಉತ್ಸವಕ್ಕೆ ಈ ವರ್ಷ 200 ವರ್ಷ,ಸರ್ಕಾರ ಈ ಉತ್ಸವದ ಅದ್ಧೂರಿ ಆಚರಣೆಗೆ ಐದು ಕೋಟಿ ಬಿಡುಗಡೆ ಮಾಡಿದ್ದು ಉತ್ಸವ ಅರ್ಥಪೂರ್ಣಗೊಳಿಸುವ ನಿಟ್ಟಿನಲ್ಲಿ ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಪೂರ್ವಭಾವಿ ಸಭೆ ನಡೆಸಿ ಮಹತ್ವದ ಸೂಚನೆಗಳನ್ನು ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ ಸೇರಿದಂತೆ ಎಲ್ಲ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಆರಂಭದಲ್ಲಿ ಮಾತನಾಡಿದ ಡಿಸಿ ಮಹ್ಮದ್ ರೋಷನ್ ಕಿತ್ತೂರು ಉತ್ಸವಕ್ಕೆ ಈ ವರ್ಷ 200 ವರ್ಷ ತುಂಬಿದ ಹಿನ್ನಲೆಯಲ್ಲಿ ಈ ಬಾರಿ ಉತ್ಸವದ ದಿನ ಏರ್ ಶೋ ನಡೆಸಲು ಯೋಚಿಸಿದ್ದೇವೆ.ಈ ವಿಚಾರದಲ್ಲಿ ಏರ್ ಫೋರ್ಸ್ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಉತ್ಸವ ಅದ್ಧೂರಿಗೊಳಿಸುವ ನಿಟ್ಟಿನಲ್ಲಿ ಪೂರ್ವಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.ಯಾವ ಯಾವ ರೀತಿಯಲ್ಲಿ ಸಿದ್ಧತೆಗಳು ನಡೆದಿವೆ ಎನ್ನುವದನ್ನು ಮಾಹಿತಿ ನೀಡಲು ವೆಬ್ ಸೈಟ್ ಆರಂಭಿಸಿದ್ದೇವೆ ಇದರಲ್ಲಿ ಪ್ರತಿದಿನ ಮಾಹಿತಿಗಳನ್ನು ಅಪ್ಡೇಟ್ ಮಾಡ್ತಿವಿ ಎಂದು ಹೇಳಿದರು.
ಅಧಿಕಾರಿಗಳ ಅಭಿಪ್ರಾಯ ಮತ್ತು ಸಾರ್ವಜನಿಕರಿಂದ ಸಲಹೆಗಳನ್ನು ಆಲಿಸಿದ ಬಳಿಕ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಕಿತ್ತೂರು ಉತ್ಸವದ ಉದ್ಘಾಟನೆಗೆ ರಾಷ್ಟ್ರಮಟ್ಟದ ಬುದ್ದಿಜೀವಿಯೊಬ್ಬರನ್ನು ಅಹ್ವಾನಿಸುವ ಚಿಂತನೆ ನಡೆದಿದೆ.ಮುಖ್ಯಮಂತ್ರಿ ಸಿದ್ರಾಮಯ್ಯ ಕೂಡಾ ಬರ್ತಾರೆ ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ಕೊಡಬೇಕು, ವೀರರಾಣಿ ಕಿತ್ತೂರು ಚೆನ್ನಮ್ಮ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ,ಅವರ ಶೌರ್ಯ,ಸಹಾಸದ ಇತಿಹಾಸದ ಗತವೈಭವ ಬಿಂಬಿಸುವ ನಿಟ್ಟಿನಲ್ಲಿ ಕಿತ್ತೂರಿನ ಇತಿಹಾಸದ ಕೀರ್ತಿಯನ್ನು ಬೆಳಗಿಸಿದ ಪ್ರತಿಯೊಬ್ಬ ಕ್ರಾಂತಿಪುರುಷರನ್ನು ಉತ್ಸವದಲ್ಲಿ ಸ್ಮರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಈ ವಿಚಾರದಲ್ಲಿ ಯಾರೂ ಮಿಸ್ ಆಗಬಾರದು ಎಂದು ಸತೀಶ್ ಜಾರಕಿಹೊಳಿ ತಾಕೀತು ಮಾಡಿದ್ರು.
ಕಿತ್ತೂರು ಉತ್ಸವದ ಅಂಗವಾಗಿ ಕಿತ್ತೂರಿನಲ್ಲಿ ಕಾರ್ಯಕ್ರಮಗಳು ನಡೆಯುತ್ತವೆ ಅದನ್ನು ಹೊರತುಪಡಿಸಿ ಉತ್ಸವದ ಅಂಗವಾಗಿ ಬೆಳಗಾವಿ ಮಹಾನಗರದಲ್ಲಿ ಒಂದು ವಿಶೇಷ ಕಾರ್ಯಕ್ರಮ ಮಾಡಬೇಕು, ಯುವ ಸಮುದಾಯವನ್ನು ಆಕರ್ಷಿಸುವ ಕಾರ್ಯಕ್ರಮ ಇದಾಗಬೇಕು ಎಂದು ಸಚುವರು ಸೂಚನೆ ನೀಡಿದ್ದು ಉತ್ಸವದ ಅಂಗವಾಗಿ ನಡೆಯುವ ಕ್ರೀಡಾ ಸ್ಪರ್ದೆಗಳಲ್ಲಿ ವಿಜಯಶಾಲಿಗಳಾಗುವ ವಿಜೇತರಿಗೆ ಅತೀ ಹೆಚ್ವಿನ ಮೊತ್ತದ ಬಹುಮಾನ ನೀಡಬೇಕು ಇದಕ್ಕಾಗಿ ವಿಶೇಷ ಯೋಜನೆ ರೂಪಿಸಬೇಕು ಎಂದು ಸಚಿವರು ಕ್ರೀಡಾಧಿಕಾರಿಗಳಿಗೆ ತಾಕೀತು ಮಾಡಿದರು.
ಶಾಸಕರಾದ ರಾಜು ಸೇಠ, ಸೇರುದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.