ಅವರೂ ಒಪ್ಪಿಕೊಂಡರು ಇವರೂ ಒಪ್ಪಿಕೊಂಡರು…!!
ಬೆಳಗಾವಿ- ಬೆಳಗಾವಿ ನಗರದ ರಸ್ತೆಯೊಂದರ ಅಗಲೀಕರಣದಲ್ಲಿ ಭೂಮಿ ಕಳೆದುಕೊಂಡಿದ್ದ ಭೂಮಿ ಮಾಲೀಕರಿಗೆ 20 ಕೋಟಿ ರೂ ಪರಿಹಾರ ನೀಡುವ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಪಡೆದಿದೆ. ಜಾಗೆಯನ್ನು ವಾಪಸ್ ಕೊಡಲು, ಪಾಲಿಕೆ ಒಪ್ಪಿಕೊಂಡಿದ್ದು,ಜಾಗೆ ವಾಪಸ್ ಪಡೆಯಲು ಭೂ ಮಾಲೀಕರೂ ಒಪ್ಪಿಕೊಂಡ ಬೆಳವಣಿಗೆ ನಿನ್ನೆಯ ದಿನ ಹೈಕೋರ್ಟ್ ನಲ್ಲಿ ನಡೆದಿದೆ.
ಸ್ಮಾರ್ಟ್ ಸಿಟಿ ರಸ್ತೆ ನಿರ್ಮಾಣದಿಂದ ಪಾಲಿಕೆಗೆ ಸಂಕಷ್ಟ ಎದುರಾಗಿತ್ತು ಈ ಪ್ರಕರಣ ರಾಜ್ಯಮಟ್ಟದಲ್ಲಿ ಸುದ್ದಿ ಮಾಡಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಹೈಕೋರ್ಟ್ ನಲ್ಲಿ ಮಹತ್ವದ ವಿಚಾರಣೆ ನಡೆದಿದೆ. ಬೆಳಗಾವಿ ಜನರಿಗೆ ಈಗ ಬಿಗ್ ರಿಲೀಫ್ ಆಗಿದೆ. ಪರಿಹಾರ ಅಥವಾ ರಸ್ತೆ ಜಮೀನು ವಾಪಸ್ ಕೊಡ್ತಾರಾ ಎಂದು ಕೇಳಿದ ಕೋರ್ಟ್ ಪ್ರಶ್ನೆ. ಪಾಲಿಕೆ ಪರ ವಕೀಲರು ಜಮೀನನ್ನು ವಾಪಸ್ ಕೊಡುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಮುಂದಿನ ವಿಚಾರಣೆ ವೇಳೆಯಲ್ಲಿ ಅಫಡವೀಟ್ ಸಲ್ಲಿಕೆ ಮಾಡಲು ವಕೀಲರಿಗೆ ಕೋರ್ಟ್ ಸೂಚನೆ ನೀಡಿದೆ. ಈ ಬೆಳವಣಿಗೆಯಿಂದ ಪಾಲಿಕೆಗೆ ಎದುರಾಗಿದ್ದ ಆರ್ಥಿಕ ಸಂಕಷ್ಟ ದೂರಾಗಿದೆ.ಬೆಳಗಾವಿ ಪಾಲೀಕೆ ಸದ್ಯಕ್ಕೆ ಸೇಫ್ ಆಗಿದ್ದು ಪಾಲಿಕೆ ಆಯುಕ್ತರಿಗೆ ದೊಡ್ಡ ರಿಲೀಫ್ ಸಿಕ್ಕಿದೆ.
ಧಾರವಾಡ ಹೈಕೋರ್ಟ್ ವಿಚಾರಣೆ ವೇಳೆಯಲ್ಲಿ ಭೂಸ್ವಾಧೀನ ಮಾಡಿಕೊಳ್ಳದೇ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡುವುದು. ಇದೊಂದು ಲ್ಯಾಂಡ್ ರಾಬರಿ ಎಂದು ಮಾನ್ಯ ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ. 2021ರಲ್ಲಿ ಸ್ಮಾರ್ಟ್ ಸಿಟಿಯಿಂದ ಒಲ್ಡ್ ಪಿಬಿ ರಸ್ತೆಯಿಂದ ಶಿವಾಜಿ ಗಾರ್ಡನ್ ವರೆಗೆ ರಸ್ತೆ ನಿರ್ಮಾಣ ಮಾಡಲಾಗಿತ್ತು. ಬಳಿಕ ಭೂಮಿ ಕಡೆದುಕೊಂಡ ಉದ್ಯಮಿ ಬಿ ಟಿ ಪಾಟೀಲ್ ಪರಿಹಾರಕ್ಕಾಗಿ ಕೋರ್ಟ್ ಮೆಟ್ಟಿಲು ಏರಿದ್ರು. ಬಳಿಕ ಪಾಲಿಕೆ ಹಿಂದಿನ ಅಧಿಕಾರಿಗಳು ನಾವು ಪರಿಹಾರ ಕೊಡ್ತಿವಿ ಎಂದು ಕೋರ್ಟ್ ಅಫಡವೀಟ್ ಸಲ್ಲಿಕೆ ಮಾಡಿದ್ರು. ಹಿಂದಿನ ವಿಚಾರಣೆ ವೇಳೆಯಲ್ಲಿ 20 ಕೋಟಿ ಹಣ ಠೇವಣಿ ತುಂಬುವಂತೆ ಕೋರ್ಟ್ ಸೂಚನೆ ನೀಡಿತ್ತು. ಇದು ಪಾಲಿಕೆಯ ಬೊಕ್ಕಸಕ್ಕೆ ದೊಡ್ಡ ಪೆಟ್ಟು ಬೀಳುವಂತೆ ಮಾಡಿತ್ತು.
ಕೇವಲ ಒಬ್ಬ ಸಂತ್ರಸ್ತರಿಗೆ 20 ಕೋಟಿ ಪರಿಹಾರ ನೀಡಿದ್ದಲ್ಲಿ ರಸ್ತೆ ನಿರ್ಮಾಣದಲ್ಲಿ ಭೂಮಿ ಕಳೆದುಕೊಂಡ ಎಲ್ಲ ಸಂತ್ರಸ್ತರಿಗೆ 150 ಕೋಟಿಗೂ ಹೆಚ್ವು ಪರಿಹಾರ ನೀಡಬೇಕಾದ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇತ್ತು ಈಗ ಭೂಮಿ ವಾಪಸ್ ಕೊಡುವ ಅಭಿಪ್ರಾಯಕ್ಕೆ ಎರಡೂ ಕಡೆಯಿಂದ ಒಪ್ಪಿಗೆ ಸಿಕ್ಕಿರುವದರಿಂದ ಬೆಳಗಾವಿ ಮಹಾನಗರ ಪಾಲಿಕೆಯ ಬೊಕ್ಕಸಕ್ಕೆ ಮರುಜೀವ ಸಿಕ್ಕಿದಂತಾಗಿದೆ.
ಈ ಬೆಳವಣಿಗೆಯಿಂದ ಆಕ್ರಮವಾಗಿ ಅಗಲೀಕರಣಗೊಂಡ ರಸ್ತೆಯ ಗಾತ್ರ ಚಿಕ್ಕದಾಗಲಿದೆ. ಆರ್ಥಿಕ ಸಂಕಷ್ಟದಿಂದ ಪಾಲಿಕೆ ಬಚಾವ್ ಆಗಿದ್ದು ಬೆಳಗಾವಿಯ ಜನ ನಿಟ್ಟುಸಿರು ಬಿಟ್ಟಿದ್ದಾರೆ.
ಪಾಲಿಕೆ ಪರವಾಗಿ ಚೇತನ್ ಮುನವಳ್ಳಿ ಭೂ ಮಾಲೀಕರ ಪರವಾಗಿ ಕೆ.ಎಲ್ ಪಾಟೀಲ ವಾದ ಮಂಡಿಸಿದ್ದರು.