ಪೋಲಿಸ್ ಠಾಣೆ ಮುಂದೆಯೇ ಕುಡುಕನ ಹೈಡ್ರಾಮಾ….!!

ಬೆಳಗಾವಿ-ಪೋಲಿಸ್ ಠಾಣೆ ಮುಂದೆಯೇ ಕುಡುಕನ ಹೈಡ್ರಾಮಾ ನಡೆಸಿದ ಘಟನೆ,ಬೆಳಗಾವಿ ನಗರದ ಟಿಳಕವಾಡಿ ಪೋಲಿಸ್ ಠಾಣೆ ಮುಂದೆ ನಡೆದಿದೆ.

ಕುಡುಕ ಅವಾಂತರ ಮಾಡಿದ ವಿಡಿಯೋ ಈಗ ಸೋಶಿಯಲ್ ಮೀಡಿಯಾದ ಬ್ರೇಕ್ ಫಾಸ್ಟ್ ಆಗಿದೆ. ಪೋಲಿಸ್ ಠಾಣೆ ಗೇಟ್ ಮುಂದೆ ಕುಡುಕನ ರಾದಾಂತಕ್ಕೆ ಪೊಲೀಸ್ ಸಿಬ್ಬಂದಿಗಳು ಹೈರಾಣಾದ ಪ್ರಸಂಗ ನಡೆದಿದೆ.

ಕುಡಿದು ಮತ್ತಿನಲ್ಲಿ ಪೋಲಿಸರ ಜೊತೆಗೆ ವಾಗ್ವಾದಕ್ಕೀಳಿದ ಮದ್ಯಪಾನಿ,ಅವ್ಯಾಚ್ಛ ಶಬ್ದಗಳಿಂದಲೇ ಮಹಿಳಾ ಪೋಲಿಸ್ ಸಿಬ್ಬಂದಿಗಳಿಗೂ ನಿಂದಿಸಿದ್ದಾನೆ.ಮಗನ ವಿರುದ್ಧ ಕಂಪ್ಲೀಟ್ ತೆಗೆದುಕೊಳ್ಳಲು ಹಿಂದೇಟು ಹಾಕಿದ್ದಕ್ಕೆ ಕುಡಕ ತಂದೆಯಿಂದ ಹೈಡ್ರಾಮಾ ನಡೆದಿದೆ ಎನ್ನಲಾಗಿದೆ.

ತಾನು ಸವಾರಿ ಮಾಡುತ್ತಿದ್ದ ಬೈಕ್ ಮಗ ಆಕ್ಸಿಡೆಂಟ್ ಮಾಡಿದ್ದಾನೆ ಮಗನಿಂದ ಬೈಕ್ ಹಾನಿಯಾಗಿದೆ ಅನ್ನೋದು ಕುಡುಕನ ಕಂಪ್ಲೇಂಟ್ ಆಗಿದೆ. ಮಗನ ವಿರುದ್ಧ ‌ದೂರು ತೆಗೆದುಕೊಳ್ಳಲೇಬೇಕೆಂದು ಕುಡುಕನ ಪಟ್ಟು ಹಿಡಿದು ಹೈಡ್ರಾಮಾ ನಡೆಸಿದ್ದಾನೆ.ಬೆಳಗಾವಿಯಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Check Also

ಭೀಕರ ಅಪಘಾತ ರಸ್ರೆ ದುರಸ್ಥಿ ಮಾಡುತ್ತಿದ್ದ ಮೂವರ ಸಾವು

ಬೆಳಗಾವಿ-ರಾಷ್ಟ್ರೀಯ ಹೆದ್ದಾರಿ ನಾಲ್ಕು ಪುಣೆ ಬೆಂಗಳೂರು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂ ಭವಿಸಿದೆ.ರಸ್ತೆಯಲ್ಲಿ ಕೆಲಸ ಮಾಡ್ತಿದ್ದವರ ಮೇಲೆ ಟ್ಯಾಂಕರ್ …

Leave a Reply

Your email address will not be published. Required fields are marked *