ಬೆಳಗಾವಿ-ಬೆಳಗಾವಿಯಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ತಾಳಕ್ಕೆ ಕುಣಿಯುವಾಗ ನಡೆದ ಗಲಾಟೆಯಲ್ಲಿ ಮೂವರಿಗೆ ಚೂರಿ ಇರಿತವಾದ ಘಟನೆ ನಡೆದಿದೆ.
ಚೂರಿ ಇರಿತದಿಂದ ಮೂವರು ಯುವಕರು ಗಾಯಗೊಂಡಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆಬೆಳಗಾವಿ ನಗರದ ಚೆನ್ನಮ್ಮ ವೃತ್ತದ ಬಳಿ ಮೆರವಣಿಗೆ ಸಾಗುವ ಸಂಧರ್ಭದಲ್ಲಿ ನಡೆದಿದೆ.ಡ್ಯಾನ್ಸ್ ಮಾಡುವ ವೇಳೆ ಕಾಲು ತಾಗಿದ್ದಕ್ಕೆ ಕಿರಿಕ್. ಆಗಿದೆ, ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ.ಈ ಗಲಾಟೆಯಲ್ಲಿ
ಮೂವರು ಹಾಸ್ಟೆಲ್ ವಿದ್ಯಾರ್ಥಿಗಳ ಮೇಲೆ ಚಾಕು ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದರು.
ಸಮಾಜ ಕಲ್ಯಾಣ ವಸತಿ ನಿಲಯದ ವಿದ್ಯಾರ್ಥಿಗಳ ಮೇಲೇ ಚಾಕು ಇರಿತವಾಗಿದೆ.ಪ್ರವೀಣ್ ಗುಂಡ್ಯಾಗೋಳ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ,
ದರ್ಶನ್ ಪಾಟೀಲ್ ಮತ್ತು ಸತೀಶ್ ಪೂಜಾರಿಗೆ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿಗಳ ಬಂಧನ
ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆಚಾಕು ಇರಿದು ಎಸ್ಕೇಪ್ ಆಗ್ತಿದ್ದವರನ್ನ ಚೇಸಿಂಗ್ ಮಾಡಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಸಿಪಿಐ ವಿಶ್ವನಾಥ್ ಕಬ್ಬೂರ ಮತ್ತು ಸಿಬ್ಬಂದಿಗಳ ತಂಡ
ಬೈಕ್ ಮೇಲೆ ಎಸ್ಕೇಪ್ ಆಗ್ತಿದ್ದ ಮೂವರನ್ನ ಹಿಡಿದಿದ್ದಾರೆ.
ವಿಶ್ವೇಶ್ವರಯ್ಯ ನಗರದ ಹತ್ತಿರ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.ಗಾಂಜಾ ಮತ್ತಿನಲ್ಲಿ ಚಾಕು ಇರಿದಿರುವ ಶಂಕೆ ವ್ಯಕ್ತವಾಗಿದೆ.ಇನ್ನೂಳಿದವರ ಮಾಹಿತಿ ಸಂಗ್ರಹಿಸಿ ಬಂಧಿಸಲು ತೆರಳಿದ ಒಂದು ಟೀಮ್.
ಯಾವ ಕಾರಣಕ್ಕೆ ಚಾಕು ಇರಿದಿದ್ದು ಅಂತಾ ವಿಚಾರಣೆ ನಡೆಸುತ್ತಿರುವ ಸಿಬ್ಬಂದಿ.ಘಟನೆ ನಡೆದ ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಪಡೆದ ಪೊಲೀಸರು.
ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ರಾಕ್ಟರ್ ಹರಿದು ಓರ್ವನ ಸಾವು
ಬೆಳಗಾವಿಯಲ್ಲಿ ಗಣೇಶ ಉತ್ಸವ ಮೆರವಣಿಗೆ ವೇಳೆ ಮತ್ತೊಂದು ಅವಘಡ ಸಂಭವಿಸಿದೆ.ಗಣಪತಿ ತೆಗೆದುಕೊಂಡು ಹೋಗ್ತಿದ್ದ ಟ್ರ್ಯಾಕ್ಟರ್ ಹರಿದು ಓರ್ವನು ಸಾವನ್ನಪ್ಪಿದ್ದಾನೆ.ರಾತ್ರಿ ಬೆಳಗಾವಿ ಪಾಟೀಲ್ ಗಲ್ಲಿಯಲ್ಲಿ ಈ ಘಟನೆ ನಡೆದಿದೆ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಮೆರವಣಿಗೆಯಲ್ಲಿ ಸಾಗ್ತಿದ್ದವರ ಮೇಲೆ ಹರಿದು ಅವಘಡ ಸಂಭವಿಸಿದೆ.
ಸದಾನಂದ ಚೌಹಾಣ್ ಪಾಟೀಲ್ ಎಂಬಾತ ಈ ಅವಘಡದಲ್ಲಿ ಮೃತಪಟ್ಟಿದ್ದಾನೆ.
ವಿಜಯ ರಾಜಗೋಳ ಎಂಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದುಚಿಕಿತ್ಸೆ ಫಲಿಸೇ ಸದಾನಂದ ಪಾಟೀಲ್ ಸಾವನ್ನೊಪ್ಪಿದ್ದಾನೆ.ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.