ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳ ಚಾಲನೆ ನೀಡುವ ಕಾರ್ಯಕ್ರಮಕ್ಕೆ ತಮ್ಮನ್ನು ಅಹ್ವಾನಿಸಿಲ್ಲ,ಈ ಕುರಿತು ಸಂಸತ್ತಿನಲ್ಲಿ ಹಕ್ಕುಚುತಿ ಮಂಡನೆ ಮಾಡುವದಾಗಿ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಸಂಸದ ಜಗದೀಶ್ ಶೆಟ್ಟರ್ ಮಾದ್ಯಮಗಳ ಜೊತೆ ಮಾತನಾಡಿ ಹಕ್ಕುಚುತಿ ಮಾಡಿದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೆಲವು ಗ್ರಾಮಗಳಲ್ಲಿ ನಮ್ಮನ್ನು ಬಿಟ್ಟು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ.ಈ ರೀತಿ ಅನೇಕ ಗ್ರಾಮಗಳಲ್ಲಿ ಆಗುತ್ತಿದೆ.ಅಭಿವೃದ್ಧಿ ಪೂಕರವಾದ ವ್ಯಕ್ತಿ ನಾನು ನನ್ನ ಬಿಟ್ಟು ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಜಗದೀಶ್ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಲ್ಲಾರು ಸೇರಿ ಭೂಮಿ ಪೂಜೆ, ಅಭಿವೃದ್ಧಿ ಮಾಡೊಣ.ನನ್ನನ್ನು ಸೇರಿ ಎಲ್ಲರಿಗೂ ಇದನ್ನೆ ಹೇಳುತ್ತೆ.ಕೇಂದ್ರ ಸರ್ಕಾರದ ಯೋಜನೆ ಸರಿಯಾಗಿ ಅನುಷ್ಠಾನ ಆಗುತ್ತಿಲ್ಲ.ಎಲ್ಲಿ ತಪ್ಪಾಗಿದೆ ನಾವು ಸರಿ ಮಾಡಬೇಕಿದೆ.ಒಂದೆರಡುಕಾರ್ಯಕ್ರಮಕ್ಕೆ ನಮ್ಮನ್ನು ಕರೆದಿಲ್ಲ.ಅಧಿಕಾರಿಗಳು ಇಲ್ಲದೇ ಕಾಮಗಾರಿ ಪೂಜೆ ಮಾಡಲಾಗಿದೆ.ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಈ ರೀತಿ ಆಗಿದೆ. ಎಂದು ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.
ಈ ರೀತಿ ಶಿಷ್ಟಾಚಾರ ಪಾಲನೆ ಮಾಡದೇ ಇದ್ರೇ ಗಂಭೀರ ಕ್ರಮ ಜರುಗಿಸುತ್ತೇನೆ.ನಾನು ಸಂಪತ್ತಿನಲ್ಲಿಯೂ ಹಕ್ಕು ಚುತಿ ಮಂಡನೆ ಮಾಡುವದಾಗಿ ಜಗದೀಶ್ ಶೆಟ್ಟರ್ ಎಚ್ಚರಿಕೆ ನೀಡಿದ್ದಾರೆ.ಶಾಸಕ ಮುನಿರತ್ನ ಬಂಧನ ವಿಚಾರ.
ಇದಕ್ಕೆ ವಿಪಕ್ಷ ನಾಯಕ ಆರ್ ಅಶೋಕ ಉತ್ತರ ಕೊಡಬೇಕು.ಯಾರೇ ತಪ್ಪು ಮಾಡಿದ್ರು ಅವರಿಗೆ ಶಿಕ್ಷೆ ಆಗಲಿದೆ.ಕಾನೂನು ತನ್ನ ಕೆಲಸ ಮಾಡಲಿದ ಎಂದರು