ಬೆಳಗಾವಿ-ಶಕ್ತಿದೇವತೆ ರೇಣುಕಾ ಯಲ್ಲಮ್ಮ ದೇವಿಯ ಸನ್ನಿಧಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದ ವೇದಿಕೆಯ ಮೇಲೆ, ಪ್ರಸಕ್ತ ರಾಜಕೀಯ ಬೆಳವಣಿಗಳ ಚಿತ್ರಣ ಮೂಡಿಸುವ ಪ್ರಸಂಗ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯನವರ ಅಕ್ಕಪಕ್ಕದಲ್ಲಿ ಡಿಕೆ ಶಿವಕುಮಾರ್ ಮತ್ತು ಸತೀಶ್ ಜಾರಕಿಹೊಳಿ ಅವರು ಕುಳಿತುಕೊಂಡಿದ್ದರು. ಸಿಎಂ ಸಿದ್ರಾಮಯ್ಯ ಮಾತನಾಡಲು ಎದ್ದು ಹೋದ ಬಳಿಕ ಸಿಎಂ ಖುರ್ಚಿ ಖಾಲಿಯಾಗಿತ್ತು. ಡಿಕೆ ಶಿವಕುಮಾರ್ ಮತ್ತು ಸತೀಶ್ ಜಾರಕಿಹೊಳಿ ಖಾಲಿ ಖುರ್ಚಿಯ ಅಕ್ಕಪಕ್ಕ ಕುಳಿತುಕೊಂಡಿದ್ದ ಪ್ರಸಂಗ ಎಲ್ಲರ ಗಮನ ಸೆಳೆಯಿತು.
ಈ ಚಿತ್ರಣದ ಮೇಲೆ ಮಾದ್ಯಮಗಳ ಕಣ್ಣು ಬಿದ್ದಾಗ, ಡಿ.ಕೆ ಶಿವಕುಮಾರ್ ತಕ್ಷಣ ಸತೀಶ್ ಜಾರಕಿಹೊಳಿ ಅವರ ಪಕ್ಕಕ್ಕೆ ಕುಳಿತುಕೊಂಡು ಗುಸುಗುಸು ಶುರು ಮಾಡಿದ್ರು.
ಭಾನುವಾರ ಸವದತ್ತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಿದ್ರು,ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರು ಸಿಎಂ ಸಿದ್ರಾಮಯ್ಯನವರ ಯೋಜನೆಗಳ ಕುರಿತು ಹೊಗಳಿದ್ದೇ ಹೊಗಳಿದ್ದು.
ಈ ಕಾರ್ಯಕ್ರಮದಲ್ಲಿ ಮಾತಾಡಿದ ಸಿಎಂ ಸಿದ್ರಾಮಯ್ಯ ನೀವು ನನ್ನ ಜೊತೆಗೆ ಇರ್ರೀ ನಾನೂ ನಿಮ್ಮ ಜೊತೆಯಲ್ಲಿ ಇರ್ತೀನಿ ನಾನು ನೀವು ಒಂದಾಗಿದ್ರೆ ನನ್ನನ್ನು ಅಲ್ಲಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಅಂದ್ರು..