Breaking News

ವೇಶ್ಯಾವಾಟಿಕೆ ಅಡ್ಡೆಯ ಮೇಲೆ ರೇಡ್ ಆದ್ಮೇಲೆ ಓಡಲೇ ಓಟ….!!…..!!!

ಬೆಳಗಾವಿ- ಖಾನಾಪುರ ಪಟ್ಟಣದ ಪ್ರಮುಖ ಲಾಡ್ಜ್ ವೊಂದರಲ್ಲಿ ಅವ್ಯಾಹತವಾಗಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ,ಎನ್ನುವ ಮಾಹಿತಿ ತಿಳಿದ ಬಳಿಕ ಖಾನಾಪೂರ ಪೋಲೀಸರು ಆ ಲಾಡ್ಜ್ ಮೇಲೆ ರೇಡ್ ಮಾಡಿದಾಗ ಅಲ್ಲಿ ಸಿಕ್ಕಿದ್ದು ಐದು ಜನ ಹುಡುಗಿಯರು, ಹನ್ನೊಂದು ಜನ ಹುಡುಗರು.

ಪೋಲೀಸರು ರೇಡ್ ಮಾಡಿದ ಬಳಿಕ ಅಲ್ಲಿದ್ದ ಯುವಕ ಯುವತಿಯರು ಓಡಲೇ….ಓಟ ಶುರು ಮಾಡಿದ್ರು ಆದ್ರೆ ಪೋಲೀಸರು ಲಾಡ್ಜ್ ಹೊರಗೂ ಫೀಲ್ಡಿಂಗ್ ಹಚ್ಚಿದ್ರು ಹೀಗಾಗಿ ಅವರು ಪೋಲೀಸರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ.

ಖಾನಾಪುರ ಪಟ್ಟಣದ ಪ್ರಮುಖ ರಸ್ತೆಯಲ್ಲಿನ ಈ ಲಾಡ್ಜ್ ಮೇಲೆ ಖಾನಾಪುರ ಪಿಆಯ್ ಮಂಜುನಾಥ ನಾಯಕ ನೇತೃತ್ವದ ತಂಡ ದಾಳಿ ನಡೆಸಿದ್ದರು.‌ ದಾಳಿ ವೇಳೆ ಐದು ಜನ ಯುವತಿಯರನ್ನು ರಕ್ಷಣೆ ಮಾಡಲಾಗಿದ್ದು, ಹನ್ನೊಂದು ಜನ ಯುವಕರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಯುವತಿಯರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ. ಕಾರ್ಯಾಚರಣೆಯಲ್ಲಿ ಅಪರಾದ ಪಿಎಸ್ಆಯ್ ಚನ್ನಕೇಶವ ಬಬಲಿ, ಮುಖ್ಯ ಪೇದೆ ಜಯರಾಮ ಹಮ್ಮಣ್ಣನ್ನವರ, ಬಾಳಪ್ಪ ಯಲಿಗಾರ್ ಮತ್ತು ಪೊಲೀಸ್ ಸಿಬ್ಬಂದಿ ಬಾಗವಹಿಸಿದ್ದರು.

Check Also

ಕೆಎಲ್ಇ ಡಾಕ್ಟರ್ ಗಳಿಗೆ ಯುದ್ಧ ಗೆದ್ದ ಸಂಭ್ರಮ

ಕೆಮ್ಮು ಮತ್ತು ಕಡಿಮೆ ರಕ್ತದೊತ್ತಡದೊಂದಿಗೆ ತೀವ್ರವಾದ ಉಸಿರಾಟದ ತೊಂದರೆ ಅನುಭವಿಸುತ್ತ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ವ್ಯಕ್ತಿಗೆ ಪೆನುಂಬ್ರಾ ಡಿವೈಸ್ ಮೂಲಕ …

Leave a Reply

Your email address will not be published. Required fields are marked *