ಬೆಳಗಾವಿ-ಬೆಳಗಾವಿಯಲ್ಲಿ ನಡು ರಸ್ತೆಯಲ್ಲೇ ತೆಂಗಿನಮರ,ಬಾಳೆಗಿಡ ನೆಟ್ಟು ದಿಢೀರ್ ಪ್ರತಿಭಟನೆ ನಡೆಸುವ ಮೂಲಕ ಗ್ರಾಮಸ್ಥರು ತಮ್ಮ ಆಕ್ರೋಶವನ್ಬು ಹೊರಹಾಕಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಹಿಂಡಲಗಾ ಗಣೇಶ ದೇವಸ್ಥಾನದ ಬಳಿಯ ರಸ್ತೆಯಲ್ಲಿ ರಸ್ತೆಯ ಗುಂಡಿಗಳಲ್ಲಿ ಗಿಡ ನೆಟ್ಟು ಪ್ರತಿಭಟನೆ ನಡೆಸಲಾಗಿದೆ.ಗುಂಡಿಬಿದ್ದ ನಡು ರಸ್ತೆಯಲ್ಲಿಯೇ ಗಿಡನೆಟ್ಟು ಜಿಲ್ಲಾಡಳಿತ,ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.
ರಸ್ತೆ ದುರಸ್ಥಿ ಮಾಡುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದ ಹಿಂಡಲಗಾ ಗ್ರಾಮದ ನಿವಾಸಿಗಳು,ರಸ್ತೆ ದುರಸ್ತಿ ಮಾಡದಿರುವುದಕ್ಕೆ ದಿಢೀರ್ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ.ಹಿಂಡಲಗಾ ನಿವಾಸಿಗಳ ದಿಢೀರ್ ಪ್ರತಿಭಟನೆ ಕೆಲಕಾಲ ಟ್ರಾಫಿಕ್ ಸಮಸ್ಯೆ ಆಯ್ತು,ತೆಗ್ಗುಗುಂಡಿ ಬಿದ್ದಿರುವ ನಡು ರಸ್ತೆಯಲ್ಲಿ ತೆಂಗಿನ ಗಿಡ, ಬಾಳೆಗಿಡ ನೆಟ್ಟು ಅಕ್ರೋಶ ವ್ಯಕ್ತವಾಯಿತು.ಆದಷ್ಟು ಬೇಗ ರಸ್ತೆ ದುರಸ್ತಿ ಮಾಡದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡುವದಾಗಿ ಎಚ್ಚರಿಕೆ ನೀಡಲಾಯಿತು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ