ಬೆಳಗಾವಿ- ಬೆಳಗಾವಿಯ ಚಿಂತಾಮನ್ ರಾವ್ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢಶಿಕ್ಷಣ ಮುಗಿಸಿದ ಶ್ರೀ ಥಾಣೇಧಾರ್ ಎರಡನೇಯ ಬಾರಿಗೆ ಅಮೇರಿಕಾದ ಸಂಸತ್ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದು ಬೆಳಗಾವಿಗೆ ಹೆಮ್ಮೆಯ ವಿಚಾರವಾಗಿದೆ.
ಅಮೆರಿಕ ಸಂಸತ್‌ನಲ್ಲಿ ಎರಡನೇ ಬಾರಿಗೆ ಕುಂದಾನಗರಿ ಮೂಲದ ವ್ಯಕ್ತಿಯ ಹೆಜ್ಜೆ ಗುರುತುಮೂಡಿವೆ.ಬೆಳಗಾವಿಯ ಸರ್ಕಾರಿ ಶಾಲೆಯಲ್ಲಿ ಓದಿದ ವ್ಯಕ್ತಿ ಅಮೆರಿಕ ಚುನಾವಣೆಯಲ್ಲಿ ವಿಜಯಶಾಲಿಯಾಗಿದ್ದು ಸಂತಸದ ಸುದ್ದಿಯಾಗಿದೆ.
ಅಮೆರಿಕದ ಸಂಸತ್ ಪ್ರತಿನಿಧಿಯಾಗಿ ಬೆಳಗಾವಿಯ ಶ್ರೀ ಥಾಣೇಧಾರ್ ಎರಡನೇಯ ಬಾರಿಗೆ ಆಯ್ಕೆಯಾಗಿದ್ದಾರೆ.ಅಮೆರಿಕದ ಮಿಚಿಗನ್ ಕ್ಷೇತ್ರದಿಂದ ಸ್ಪರ್ಧಿಸಿ ಸಂಸತ್ ಪ್ರತಿನಿಧಿಯಾದ ಶ್ರೀ ಥಾಣೇಧಾರ ವಿಜಯ ಪತಾಕೆ ಹಾರಿಸಿದ್ದಾರೆ.ಡೆಮಾಕ್ರಟಿಕ್ ಪಕ್ಷದಿಂದ ಎರಡನೇ ಬಾರಿಗೆ ಸಂಸತ್ ಪ್ರತಿನಿಧಿಯಾಗಿ ಆಯ್ಕೆ ಆದ ಶ್ರೀ ಥಾಣೇಧಾರ್ ಬೆಳಗಾವಿಗೆ ಕೀರ್ತಿ ತಂದಿದ್ದಾರೆ.
ಬೆಳಗಾವಿಯ ಮೀರಾಪುರಗಲ್ಲಿಯಲ್ಲಿ ಬಾಲ್ಯ ಕಳೆದಿದ್ದ ಶ್ರೀ ಥಾಣೇಧಾರ್,ಚಿಕ್ಕೋಡಿ ಮೂಲದವರಾಗಿದ್ದು ಬೆಳಗಾವಿಯ ಚಿಂತಾಮನ್ ರಾವ್ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ.ಕರ್ನಾಟಕ ವಿವಿಯಲ್ಲಿ ಬಿಎಸ್‌ಸಿ ಪದವಿ, ಮುಂಬೈ ವಿವಿಯಲ್ಲಿ ರಸಾಯನ ಶಾಸ್ತ್ರ ವಿಷಯದಲ್ಲಿ ಎಂಎಸ್‌ಸಿ ವ್ಯಾಸಂಗ ಮಾಡಿದ್ದಾರೆ.
ಉನ್ನತ ವ್ಯಸಾಂಗಕ್ಕೆ 1979 ರಲ್ಲಿ ಅಮೆರಿಕಕ್ಕೆ ತೆರಳಿ ಪಾಲಿಮರ್ ಕೆಮಿಸ್ಟ್ರಿ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಅವರು ಅಮೇರಿಕದ ಮಿಚಿಗನ್ ವಿವಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.ಪ್ರಾಧ್ಯಾಪಕ ಹುದ್ದೆಗೆ ರಾಜೀನಾಮೆ ನೀಡಿ ಉದ್ಯಮಿಯಾಗಿ ಹೊರಹೊಮ್ಮುವ ಥಾಣೇಧಾರ್ ಈಗ ಅಮೇರಿಕಾದ ಸಂಸತ್ ಪ್ರತಿನಿಧಿಯಾಗಿದ್ದಾರೆ.
2020 ಹಾಗೂ 2024ರಲ್ಲಿ ಅಮೆರಿಕ ಚುನಾವಣೆಯಲ್ಲಿ ಗೆಲುವು ದಾಖಲಿಸಿದ ಥಾಣೇಧಾರ್ ಅಮೇರಿಕಾದಲ್ಲಿ ಬೆಳಗಾವಿಯ ಛಾಪು ಮೂಡಿಸಿದ್ದಾರೆ.ಗೆಲುವಿಗೆ ಕಾರಣಿಕರ್ತರಾರ ಮತದಾರರಿಗೆ ಫೆಸ್ಬುಕ್ ಮೂಲಕ ಶ್ರೀ ಥಾಣೇಧಾರ್ ಕೃತಜ್ಞತೆ ಸಲ್ಲಿಸಿದ್ದಾರೆ.
—