ಬೆಳಗಾವಿ -ಹೆದ್ದಾರಿಯಲ್ಲಿ ಕಾರು ಅಡ್ಡಗಟ್ಟಿ ಪಿಸ್ತೂಲ್ ತೋರಿಸಿ 75ಲಕ್ಷ ಎಗರಿಸಿದ ಘಟನೆ,ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹರಗಾಪುರ ಗ್ರಾಮದ ಬಳಿ ನಡೆದಿದೆ.
ಮಹಾರಾಷ್ಟ್ರದ ಕೊಲ್ಲಾಪುರದಿಂದ ಕೇರಳಕ್ಕೆ ಹೊರಟ್ಟಿದ ಕಾರನ್ನು ಸಿನಿಮೀಯ ರೀತಿಯಲ್ಲಿ ಹಿಂಬಾಲಿಸಿ ಅಡ್ಡಗಟ್ಟಿದ ಖದೀಮರು ಪಿಸ್ತೂಲ್ ತೋರಿಸಿ ಕಾರಿನಲ್ಲಿ ಇದ್ದವರನ್ನು ಕೆಳಗೆ ಇಳಿಸಿ ಕಾರಿನಲ್ಲಿದ್ದ 75 ಲಕ್ಷರೂ ಗಳನ್ನು ಕಾರಿನ ಸಮೇತ ದೋಚಿಕೊಂಡು ಪರಾರಿಯಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಇನೋವಾ ಕಾರು ಅಡ್ಡಗಟ್ಟಿ ಬಂದೂಕು ತೋರಿಸಿ.ಕಾರು ಚಾಲಕ ಮತ್ತು ಚಿನ್ನದ ವ್ಯಾಪಾರಿ ಕೆಳಗಿಳಿಸಿ.ಕಾರು ಮತ್ತು 75 ಲಕ್ಷ ಹಣದ ಜೊತೆಗೆ ಖದೀಮರು ಎಸ್ಕೇಪ್ ಆಗಿದ್ದಾರೆ.
ಚಿನ್ನದ ವ್ಯಾಪಾರ ಮುಗಿಸಿ ಹಣದ ಜೊತೆಗೆ ಕೇರಳಕ್ಕೆ ಹೋರಟ್ಟಿದ್ದ ವ್ಯಾಪಾರಿ ಸೂರಜ್ ವನಮಾನೆ ಇನ್ನೋವಾ ಕಾರಿನಲ್ಲಿ ಕೇರಳಕ್ಕೆ ಹೊರಟಿದ್ದ,ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ