ಬೆಳಗಾವಿ-ಬೆಳಗಾವಿ ಮಹಾನಗರದ ವಡ್ಡರವಾಡಿಯಲ್ಲಿ ಮಹಿಳೆಯ ಮೇಲೆ ಅಮಾನೀಯವಾಗಿ ಹಲ್ಲೆ ಮಾಡಲಾಗಿದೆ.ಮನಬಂದಂತೆ ಥಳಿಸಿ ಮೈಮೇಲಿನ ಬಟ್ಟೆಯನ್ನು ಹರಿದು ಅಮಾನವೀಯವಾಗಿ ನಡೆದುಕೊಂಡ ಘಟನೆ ನಡೆದಿದೆ.
ಮಹಿಳೆಯ ಮೇಲೆ ಮನಬಂದಂತೆ ಥಳಿತ, ಹರಿದ ಬಟ್ಟೆ ಕೈಯಲ್ಲಿ ಹಿಡಿದು ಆಕ್ರೋಶ ವ್ಯಕ್ತಪಡಿಸುತ್ತಿರುವ ತಾಯಿ ಈ ಎಲ್ಲ ದೃಶ್ಯ ಕಂಡುಬಂದಿದ್ದು ಬೆಳಗಾವಿ ನಗರದ ವಡ್ಡರವಾಡಿಯಲ್ಲಿ. ಹೌದು ಕಳೆದ ಮೂರು ದಿನಗಳ ಹಿಂದೆ ರಾತ್ರಿ 09ಗಂಟೆ ವಡ್ಡರವಾಡಿಯಲ್ಲಿ ಅಮಾನವೀಯ ಘಟನೆ ನಡೆದುಹೋಗಿತು. ನಿಮ್ಮ ಮಗಳು ವೇಶ್ಯಾವಾಟಿಕೆ ಮಾಡ್ತಿದ್ದಾಳೆ ಅಂತಾ ಆರೋಪಿಸಿ ಕೆಲವು ಜನರು ಮನೆಗೆ ನುಗ್ಗಿ ತಾಯಿ ಮತ್ತು ಮಗಳನ್ನು ಹೊರಗಡೆ ಎಳೆದು ತಂದು ತಾಯಿ, ಮಗಳ ಮೇಲೆ ಹಲ್ಲೆ ಮಾಡಿ ಅಟ್ಟಹಾಸ ಮೆರೆದಿದ್ದರು. ಮನೆಯ ಪಕ್ಕದ ಅಷ್ಟೇಕರ್ ಕುಟುಂಬದಿಂದ ಹಲ್ಲೆ ಆರೋಪ ಕೇಳಿಬಂದಿದ್ದು ಸಾರ್ವಜನಿಕವಾಗಿ ವೃದ್ಧೆಯ ಬ್ಲೌಸ್ ಹರಿದು ಹಾಕಿ ಅಮಾನವೀಯವಾಗಿ ವರ್ತನೆ ತೋರಲಾಗಿದ್ದು ಸಂಬಂಧ ಇಲ್ಲದವರು ಮನೆಗೆ ಬಂದು ಹೋಗ್ತಾರೆ. ವೇಶಾವಾಟಿಕೆ ದಂಧೆ ಮಾಡ್ತಿದೀರಿ ಅಂತಾ ಆರೋಪಿಸಿ ಅಮಾನವೀಯವಾಗಿ ವರ್ತನೆ ತೋರಿ ಹಲ್ಲೆ ಮಾಡಲಾಗಿತ್ತು. ತಾಯಿ ಮಗಳನ್ನ ಮನೆ ಬಿಡಿಸಲು ಈ ರೀತಿ ಸುಖಾಸುಮ್ಮನೆ ಜಗಳ ತೆಗೆದು ಹಲ್ಲೆ ಮಾಡ್ತಿದ್ದಾರೆ. ಹಲ್ಲೆ ಆಗುತ್ತಿದ್ದಂತೆ ಪುಟ್ಟ ಬಾಲಕಿ ಜೊತೆಗೆ ನಾಲ್ಕು ವರ್ಷದಿಂದ ವಾಸವಾಗಿರುವ ಮೂವರು ಸೇರಿಕೊಂಡು ಸಂಬಂಧಿಸಿದ ಮಾಳಮಾರುತಿ ಪೊಲೀಸ ಠಾಣೆಗೆ ನ್ಯಾಯಕ್ಕಾಗಿ ಅಲೆದಾಡಿದ್ದಾರೆ.
ಇದಾದನಂತರ ಮನೆ ಬಿಟ್ಟು ನ್ಯಾಯ ಕೊಡಿಸಿ, ರಕ್ಷಣೆ ನೀಡಿ ಅಂತಾ ಬೆಳಗಾವಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಕಮಿಷನರ್ ಗೆ ದೂರು ನೀಡುತ್ತಿದ್ದಂತೆ ಮೂವರು ಜನರ ವಿರುದ್ಧ ಮಾಳಮಾರುತಿ ಪೊಲೀಸ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು ಬಿಎನ್‌ಎಸ್ ಕಾಯ್ದೆಯಡಿ 115(2), 3(5), 331, 352, 74 ಸೆಕ್ಷನ್ ನಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.
ಮಹಿಳೆ ಮೇಲೆ ಹಲ್ಲೆ ಪ್ರಕರಣ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿದ್ದಂತೆ ಘಟನಾ ಸ್ಥಳಕ್ಕೆ ಶಾಸಕ ಆಸೀಫ್ ಸೇಠ್,ಕಮಿಷನರ್ ಯಡಾ ಮಾರ್ಟಿನ್, ಡಿಸಿಪಿ ರೋಹನ್ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿ ನ್ಯಾಯ ಕೊಡಿಸುವ ಭರವಸೆ ನೀಡಿದ್ದು ಪ್ರಕರಣ ಸಂಬಂಧ ಇಂದಿರಾ ಅಷ್ಟೇಕರ್, ಹೂವಪ್ಪ ಅಷ್ಟೇಕರ್, ಮಣಿಕಠ ಅಷ್ಟೇಕರ್ ಎಂಬುವವನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಲ್ಲೆಗೊಳಗಾದ ಸಂತ್ರಸ್ತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ನಾವು ಮನೆ ಖಾಲಿ ಮಾಡಬೇಕು ಎಂಬ ಉದ್ದೇಶಕ್ಕೆ ಈ ರೀತಿ ಕಿರುಕುಳ ನೀಡುತ್ತಿದ್ದಾರೆ. ಮನೆಗೆ ಯಾರಾದರೂ ಬಂದರೂ ಪರಪುರುಷರ ಜೊತೆಗೆ ನೀನು ಸಂಬಂಧ ಹೊಂದಿದ್ದೀಯಾ ಎಂದು ಅವಮಾನಿಸುತ್ತಾರೆ. ನಾನು ವೇಶ್ಯಾವಾಟಿಕೆ ನಡೆಸಿಲ್ಲ, ಬೇಕಾದರೆ ನೀವು ನನ್ನ ವಿರುದ್ಧ ದೂರು ಕೊಡಿ ಎಂದಿದ್ದೆನೇ. ಹೂವಪ್ಪ ಅಷ್ಟೇಕರ ನಮ್ಮ ತಾಯಿ ಸೀರೆ ಎಳೆದಾಡಿದ್ದಾನೆ, ಪೂಜಾ ಅಷ್ಟೇಕರ ನಮಗೆ ಧಮ್ಕಿ ಹಾಕಿದ್ದಾಳೆ ಎಂದು ಆರೋಪಿಸಿದ್ದಾರೆ. ಇದೇ ಪ್ರಕರಣಕ್ಕೆ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಪ್ರತಿಕ್ರಿಯೆ ನೀಡಿದ್ದು ಘಟನೆ ಸಂಬಂಧ ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬೇರೆ ವಿಷಯಕ್ಕೆ ದೂರುದಾರರು ಮತ್ತು ಅಕ್ಕ ಪಕ್ಕದ ಮನೆಯವರ ಮಧ್ಯ ಜಗಳ ಆಗಿದೆ. ಪ್ರಕರಣ ಸಂಬಂಧ ವರದಿ ನೀಡುವಂತೆ ಡಿಸಿಪಿ ಅವರಿಗೆ ಸೂಚಿಸಿದ್ದೇನೆ. ಇನ್ನು ದೂರು ತೆಗೆದುಕೊಳ್ಳಲು ವಿಳಂಬ ಆಗಿರುವುದಕ್ಕೆ ಮತ್ತು ದೂರು ವಾಪಸ್ಸು ಪಡೆಯಲು ಪಂಚರು ಒತ್ತಡ ಹಾಕಿರುವ ಬಗ್ಗೆಯೂ ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ.
ಮಹಿಳೆ ತಪ್ಪು ಮಾಡಿದ್ರೆ ಪೊಲೀಸರಿಗೆ ದೂರು ಕೊಡಬಹುದಿತ್ತು. ಕಾನೂನಾತ್ಮಕವಾಗಿ ತಪ್ಪು ಆಗಿದ್ದಲ್ಲಿ ಸರಿಪಡಿಸುವ ಕೆಲಸವನ್ನು ಸ್ಥಳೀಯರು ಮಾಡಬೇಕಿತ್ತು. ಆದರೆ, ಮಹಿಳೆ ಮೇಲೆ ಅಮಾನವೀಯವಾಗಿ ನಡೆದುಕೊಂಡಿದ್ದು ಎಷ್ಟರ ಮಟ್ಟಿಗೆ ಸರಿ. ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸರು ಎಚ್ಚರ ವಹಿಸಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಕೊಡಿಸಬೇಕಿದೆ.