ಬೆಳಗಾವಿ – ಗೆಳೆಯರ ಜೊತೆ ಪಾರ್ಟಿ ಮಾಡಲು ಹೋದಾಗ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನೊಪ್ಪಿದ ಘಟನೆ ಬೆಳಗಾವಿ ಪಕ್ಕದ ಹಿಂಡಲಗಾ ಸುಳಗಾ ಗ್ರಾಮದ ಹದ್ದಿಯಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಬೆಳಗಾವಿ ಮಹಾನಗರದ ಶಹಾಪೂರ್ ಪ್ರದೇಶದ ಬಶೀರ್ ಚಿಕ್ಕೋಡಿ ಅಳ್ವಾನ್ ಗಲ್ಲಿಯ ನಿವಾಸಿ ಎಂದು ಗುರುತಿಸಲಾಗಿದೆ.
KSRTC ಬಸ್ ಚಾಲಕನಾಗಿದ್ದ ಬಶೀರ್ ಚಿಕ್ಕೋಡಿ ಇಂದು ಗೆಳೆಯರ ಜೊತೆ ಸೇರಿಕೊಂಡು ಹಿಂಡಲಗಾ ಸುಳಗಾ ಹತ್ತಿರ ಪಾರ್ಟಿ ಮಾಡಲು ಹೋಗಿದ್ದ ಈ ಸಂಧರ್ಭದಲ್ಲಿ ಬಶೀರ್ ಮೃತಪಟ್ಡಿದ್ದಾನೆ ಆತನ ಶವವನ್ನು ಆತನ ಗೆಳೆಯರು ಜಿಲ್ಲಾ ಆಸ್ಪತ್ರೆಗೆ ತಂದಿದ್ದಾರೆ.ಮೃತಪಟ್ಡ ವ್ಯಕ್ತಿಯ ಕುಟುಂಬದವರಿಗೂ ಸಾವಿನ ವಿಷಯವನ್ನು ತಿಳಿಸಿದ್ದಾರೆ.
ಬಶೀರ್ ಚಿಕ್ಕೋಡಿಯ ಕುಟುಂಬಸ್ಥರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು ಪೋಲೀಸರು ತನಿಖೆ ನಡೆಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ