Breaking News

ಎರಡು ಕರಡಿ ದಾಳಿ ಮಾಡಿ ಕಾಲು ಕಟ್ ಮಾಡಿದ್ರೂ, ಆತ ಬದುಕಿದ್ದು ಪವಾಡ….!!

ಬೆಳಗಾವಿ – ಅಜ್ಜ ಎಂದಿನಂತೆ ದನ ಮೇಯಿಸಲು ತನ್ನ ಗದ್ದೆಗೆ ಹೋಗಿದ್ದ ಸಂಧರ್ಭದಲ್ಲಿ ಎರಡು ಕರಡಿಗಳು ಆತನ ಮೇಲೆ ದಾಳಿ ಮಾಡಿ ಕಾಲು ಕಟ್ ಮಾಡಿದರೂ ಆತ ಮರ ಏರಿ ಬದುಕಿದ್ದು ಪವಾಡವೇ ಸರಿ, ಈ ಘಟನೆ ನಡೆದಿದ್ದು ಖಾನಾಪೂರ ತಾಲ್ಲೂಕಿನ ಕಣಕುಂಬಿ ಹತ್ತಿರದ ಮಾನಗಾಂವ್ ಗ್ರಾಮದಲ್ಲಿ

ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ದಂಪತಿ ಮೇಲೆ ಎರಡು ಕರಡಿ ದಾಳಿ ನಡೆಸಿ ರೈತನ ಕಾಲು‌ ತುಂಡು ತುಂಡು ಮಾಡಿವೆ.ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮಾನಗಾಂವ್ ಗ್ರಾಮದಸಖಾರಾಮ ಮಹಾದೇವ ಗಾಂವಕರ್(63) ಗಂಭೀರವಾಗಿ ಗಾಯಗೊಂಡಿದ್ದಾನೆ.

ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಎರಡು ಕರಡಿಗಳು ದಂಪತಿಗಳ ಮೇಲೆ ದಾಳಿ ಮಾಡಿವೆ.
ಸಖಾರಾಮ ಮಹಾದೇವ ಗಾಂವಕರ್(63) ಗಂಭೀರವಾಗಿ ಗಾಯಗೊಂಡಿದ್ದು ಆತನ ಎರಡು ಕಾಲುಗಳನ್ನು ಕರಡಿಗಳು ತುಂಡು ತುಂಡಾಗಿಸಿವೆ. ಮರವೇರಿ ವೃದ್ಧನ ಪತ್ನಿ ಪ್ರಾಣ ಉಳಿಸಿಕೊಂಡಿದ್ದಾಳೆ. ತನ್ನ ಪತಿ ಕಾಣದಾದಾಗ ಹುಡುಕಾಟ ನಡೆಸಿದ್ದಾಳೆ. ಆಗ ಪತಿಯ ಅವಸ್ಥೆ ಕಂಡು ಹೌಹಾರಿದ್ದಾಳೆ.
ತೀವ್ರ ಗಂಭೀರ ಗಾಯಗೊಂಡ ಸಖಾರಾಮನನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದೆ.

ಕರಡಿ ದಾಳಿ ಮಾಡಿದ ಬಳಿಕ ಗಂಭೀರವಾಗಿ ಗಾಯಗೊಂಡ ರೈತ ಹೆದರದೇ ಕರಡಿಗೆ ಮಚ್ಚಿನಿಂದ ಹಲ್ಲೆ ಮಾಡಿದ ಬಳಿಕ ಎರಡೂ ಕರಡಿಗಳು ಅಲ್ಲಿಂದ ಜಾಗ ಖಾಲಿ ಮಾಡಿವೆ.

Check Also

ಈಜಲು ಹೋದ ಬಾಲಕ ನೀರು ಪಾಲು

ಬೆಳಗಾವಿ ಕೆರೆಯಲ್ಲಿ ಈಜಲು ಹೋದ ಬಾಲಕನೋರ್ವ ನೀರು ಪಾಲಾದ ಘಟನೆ ಬೆಳಗಾವಿ ತಾಲೂಕಿನ ವಾಘವಡೆ ಗ್ರಾಮದಲ್ಲಿ ನಡೆದಿದೆ.ಬೆಳಗಾವಿ ತಾಲೂಕಿನ ವಾಘವಡೆ …

Leave a Reply

Your email address will not be published. Required fields are marked *