Breaking News

ಸಂತೋಷ್ ಪದ್ಮಣ್ಣವರ್ ಮರ್ಡರ್ ಕೇಸ್ ನಲ್ಲಿ ಡಾಕ್ಟರ್ ಅರೆಸ್ಟ್

ಬೆಳಗಾವಿ- ಬೆಳಗಾವಿಯ ಬಡ್ಡಿ ದಂಧೆಯ ಉದ್ಯಮಿ ಸಂತೋಷ್ ಪದ್ಮಣ್ಣವರ್ ಕೊಲೆ ಪ್ರಕರಣದಲ್ಲಿ ಭಾಗಿಯಾದ BAMS ಡಾಕ್ಟರ್ ಪ್ರಶಾಂತ್ ಶಿವಾನಂದ ನನ್ನು ಬೆಳಗಾವಿಯ ಮಾಳ ಮಾರುತಿ ಠಾಣೆಯ ಪೋಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಸಂತೋಷ್ ಪದ್ಮಣ್ಣವರ್ ಕೊಲೆ ಪ್ರಕರಣದಲ್ಲಿ ಸಂತೋಷ್ ಪದ್ಮಣ್ಣವರ್ ಪತ್ನಿ ಮತ್ತು ಆಕೆಯ ಗೆಳೆಯ ಸೇರಿದಂತೆ ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು ಪೋಲೀಸರ ತನಿಖೆಯಲ್ಲಿ ಪದ್ಮಣ್ಣವರ್ ಕೊಲೆಯಲ್ಲಿ ಡಾಕ್ಟರ್ ಪಾತ್ರ ಕಂಡು ಬಂದಿರುವದರಿಂದ ಈಗ ಡಾಕ್ಟರ್ ಸಹಿತ ಜೈಲುಪಾಗಿದ್ದಾನೆ.

ಸಂತೀಷ್ ಪದ್ಮಣ್ಣವರ್ ಸಾವಿನ ಬಳಿಕ ಅದೊಂದು ಸಹಜ ಸಾವು ಎಂದು ಪರಿಗಣಿಸಲಾಗಿತ್ತು. ಶವ ಸಂಸ್ಕಾರವೂ ಮಾಡಲಾಗಿತ್ತು, ನಂತರ ಸಂತೋಷ್ ಪದ್ಮಣ್ಣವರ್ ಮಗಳು ಇದು ಸಹಜ ಸಾವು ಅಲ್ಲ ತಂದೆಯ ಕೊಲೆಯಾಗಿದೆ ಎಂದು ಮಗಳು ಪೋಲೀಸರಿಗೆ ದೂರು ನೀಡಿದ ಬಳಿಕ ಸಂತೋಷ್ ಪದ್ಮಣ್ಣವರ್ ಕೊಲೆ ಪ್ರಕರಣ ಬಯಲಾಗಿತ್ತು.

ಸಂತೋಷ್ ಪದ್ಮಣ್ಣವರ್ ಕೊಲೆ ಪ್ರಕರಣದಲ್ಲಿ ಬಂಧಿತ ಡಾಕ್ಟರ್ ಯಾವ ಇಂಜೆಕ್ಷನ್ ಮಾಡಬೇಕು ಯಾವ ಗುಳಗಿ ಕೊಡಬೇಕು ಎನ್ನುವ ಸಲಹೆ ಕೊಟ್ಟಿದ್ದ ಹೀಗಾಗಿ ಇಂಜೆಕ್ಷನ್ ಗುಳಗಿ ಬರೆದುಕೊಟ್ಟು ಕೊಲೆ ಪ್ರಕರಣದಲ್ಲಿ ಭಾಗಿಯಾದ, ಡಾಕ್ಟರ್ ಸಹಿತ ಈಗ ಜೈಲುಪಾಗಿದ್ದಾನೆ.

In the ongoing investigation of the Santosh Padmannavar case, accused no 5 has been arrested. His name is Prashanth Shivanand aged 38 years. He is a BAMS Doctor. His role is in suggesting the type of tablet and injection that is to be given to the deceased in the commission of the crime. He has been sent for judicial custody.

Check Also

ಇಡೀ ರಾತ್ರಿ ಠಾಣೆಯಿಂದ ಠಾಣೆಗೆ ಸಿಟಿ ರವಿ ಶಿಪ್ಟ್…..!!

ನಿನ್ನೆ ಮಧ್ಯಾಹ್ನ ದಿಂದ ಇಂದು ಬೆಳಗಿನ ಜಾವದವರೆಗೆ ಘಟನೆಯ ಸಂಪೂರ್ಣ ವಿವರ ಬೆಳಗಾವಿ- ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಿನ್ನೆ ಮಧ್ಯಾಹ್ನದಿಂದ …

Leave a Reply

Your email address will not be published. Required fields are marked *