ಬೆಳಗಾವಿ- ನನ್ನ ಮಗಳ ಜೊತೆ ಮಾತಾಡಬೇಡ ಎಂದಿದ್ದಕ್ಕೆ ಕ್ರೂರಿ ಲವರ್ ನೊಬ್ಬ ಹುಡುಗಿಯ ತಾಯಿ ಮತ್ತು ಹುಡುಗಿಯ ತಮ್ಮ ಇಬ್ಬರನ್ನೂ ಮರ್ಡರ್ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಿಪ್ಪಾಣಿ ತಾಲ್ಲೂಕಿನ ಅಕ್ಟೋಳ ಗ್ರಾಮದ ಬಾಳೋಬಾ ಮಾಳ ಪ್ರದೇಶದಲ್ಲಿ ಇಬ್ಬರ ಕೊಲೆಯಾಗಿದೆ. ಮಂಗಲ್ ಸುಕಾಂತ ನಾಯಿಕ. ವಯಸ್ಸು: 50, ಹುಡುಗಿಯ ತಾಯಿ,
ಪ್ರಜ್ವಲ್ ಸುಕಾಂತ ನಾಯಿಕ, ವಯಸ್ಸು: 18 ವರ್ಷ, ಸಾ: ಬಾಳೋಬಾ ಈತ ಹುಡುಗಿಯ ತಮ್ಮ ಈ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.ಎಸ್.ಪಿ. ಬೆಳಗಾವಿ ಜಿಲ್ಲೆ, ಬೆಳಗಾವಿ. ಡಿವೈಎಸ್ಪಿ ಚಿಕ್ಕೋಡಿ ಇವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ.
ಆರೋಪಿತ ರವಿ ಲಕ್ಷ್ಮಣ ಖಾನಪ್ಪಗೋಳ ಉರ್ಫ ನಾಯಿಕ 32 ಈತ ಮತ್ತು ಕೆಲವು ಜನ ಸೇರಿ ಇಬ್ಬರ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.