ಬೆಳಗಾವಿ-ಹುಚ್ಚು ಕೋತಿಯ ಅಟ್ಟಹಾಸಕ್ಕೆ ಬೆಳಗಾವಿ ಪಕ್ಕದ ನೀಲಜಿ ಗ್ರಾಮಸ್ಥರು ನಲುಗಿದ್ದಾರೆ.ಕಳೆದೊಂದು ವಾರದಲ್ಲಿ ಮೂವರು ಮೇಲೆ ಮೆಂಟಲ್ ಕೋತಿಯ ಡೆಡ್ಲಿ ಅಟ್ಯಾಕ್ ಮಾಡಿ ಹಲವಾರು ಜನರನ್ನು ಗಾಯಪಡಿಸಿದೆ.
ಹುಚ್ಚು ಕೋತಿಯ ಡೆಡ್ಲಿ ಅಟ್ಯಾಕ್‌ಗೆ ನೀಲಜಿ ಗ್ರಾಮದ ಜನ ಕಂಗಾಲಾಗಿದ್ದಾರೆ.ಮನೆಯನ್ನೂ ಬಿಡ್ತಿಲ್ಲ, ಶಾಲೆಯನ್ನೂ ಬಿಡ್ತಿಲ್ಲ ಸಿಕ್ಕ ಸಿಕ್ಕವರ ಮೇಲೆ ಕೋತಿಯ ದಾಳಿ ಮಾಡುತ್ತಿದ್ದು ಕೋತಿ ಕಾಟಕ್ಕೆ ಜನ ಬೇಸತ್ತು ಹೋಗಿದ್ದಾರೆ.
ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದಲ್ಲಿ ಕೋತಿ ಕಾಟ ಮುಂದುವರೆದಿದೆ. ಕೋತಿ ದಾಳಿ ತಪ್ಪಿಸಿಕೊಳ್ಳಲು ದೊಣ್ಣೆ ಬಡಿಗೆ ಹಿಡಿದುಕೊಂಡು ಜನ ಓಡಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.ಮನೆಯಿಂದ ಹೊರಗಡೆ ಹೋಗಲು ರಕ್ಷಣೆಗೆ ಬೇಕು ಕೈಯಲ್ಲಿ ದೊಣ್ಣೆಗಳು ಹಿಡಿದುಕೊಂಡೆ ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಗ್ರಾಮದಲ್ಲಿ ಬೀಡುಬಿಟ್ಟ ಮೆಂಟಲ್ ಕೋತಿಯನ್ನು ಊರಿನಿಂದ ಓಡಿಸಲು ಗ್ರಾಮಸ್ಥರು ಹರಸಾಹಸಪಡುತ್ತಿದ್ದಾರೆ.ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನವಿಲ್ಲ,ಕಳೆದೊಂದು ವರ್ಷದಿಂದ ಗ್ರಾಮದಲ್ಲಿ ಬೀಡುಬಿಟ್ಟ ಕೋತಿಗಳ ಗ್ಯಾಂಗ್ ಓಡಿಸಲು ಸಾಧ್ಯಾವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಕೋತಿಗಳನ್ನ ಹಿಡಿದುಕೊಂಡು ಹೋಗುವಂತೆ ಮನವಿ ಸಲ್ಲಿದ್ರೂ ಅರಣ್ಯ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ನೀಲಜಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.