ಮೂಡಲಗಿ : ಮಹಿಳೆಯೊಬ್ಬರು ಮೂರು ಮಕ್ಕಳಿಗೆ ಜನ್ಮ ನೀಡಿದ ಘಟನೆ ಮೂಡಲಗಿ ಪಟ್ಟಣದ ಆರೋಗ್ಯ ಆಧಾರ್ ಆಸ್ಪತ್ರೆಯಲ್ಲಿ ನಡೆದಿದೆ.
ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದ ನಿವಾಸಿ ಪೂಜಾ ಕಾಲತಿಪ್ಪಿ ಎಂಬುವರು ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಎರಡು ಗಂಡು ಒಂದು ಹೆಣ್ಣು ಈ ಮೂರು ಮಕ್ಕಳ ಆರೋಗ್ಯ ಉತ್ತಮವಾಗಿದೆ ಎಂದು ಅವುಗಳನ್ನು ಪರೀಕ್ಷಿಸಿದ ಮಕ್ಕಳು ತಜ್ಞ ಮಹಾಂತೇಶ ಕಡಾಡಿ ತಿಳಿಸಿದ್ದಾರೆ. ಆಸ್ಪತ್ರೆಯ ವೈದ್ಯರಾದ ಮಯೂರಿ ಕಡಾಡಿ, ವಿಜಯ್ ಬೆನಕಟ್ಟಿ, ಬಸವರಾಜ್ ಹೊನ್ನಾ ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಇದ್ದರು.