ಬೆಳಗಾವಿ – ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ಏಕೈಕ ಕಾಂಗ್ರೆಸ್ ಮಹಾ ಅಧಿವೇಶನ ನಡೆದಿತ್ತು,ಈ ಅಧಿವೇಶನ ನಡೆದಿದ್ದು ಬೆಳಗಾವಿ ಮಹಾನಗರದಲ್ಲಿ ಅದು ಬೆಳಗಾವಿ ಪಾಲಿಗೆ ಹೆಮ್ಮೆಯ ವಿಚಾರ, ಈ ಅಧಿವೇಶನ ನಡೆದು ನೂರು ವರ್ಷಗಳು ಗತಿಸಿವೆ ಹೀಗಾಗಿ ಬೆಳಗಾವಿ ಈಗ ರಾಷ್ಟ್ರದ ಗಮನ ಸೆಳೆಯುತ್ತಿದೆ.
ಮಹಾತ್ಮ ಗಾಂಧಿ ಅವರು ಬೆಳಗಾವಿಯಲ್ಲಿ ನಡೆಸಿದ ಕಾಂಗ್ರೆಸ್ ಅಧಿವೇಶನಕ್ಕೆ ಈಗ ಶತಮಾನೋತ್ಸವದ ಸಂಭ್ರಮ ಈ ಕಾರ್ಯಕ್ರಮ ಡಿಸೆಂಬರ್ 26,ಹಾಗೂ 27 ರಂದು ಎರಡು ದಿನ ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ನಡೆಯಲಿದೆ ಅದಕ್ಕಾಗಿ ಅತೀ ದೊಡ್ಡ ಪೆಂಡಾಲ್ ಹಾಕಲಾಗುತ್ತಿದೆ.ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು CP ED ಮೈದಾನಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಶೀಲನೆ ಮಾಡಿದ್ದಾರೆ.
ಗಾಂಧೀಜಿ ಅವರು ಬೆಳಗಾವಿಯಲ್ಲಿ ನಡೆಸಿದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಅಂಗವಾಗಿ ಬೆಳಗಾವಿ ಮಹಾನಗರದ ಗಲ್ಲಿ,ಗಲ್ಲಿಗಳಲ್ಲಿ,ರಸ್ತೆಗಳಲ್ಲಿ,ಸರ್ಕಲ್ ಗಳಲ್ಲಿ ಅತ್ಯಾಕರ್ಷಕ ಲೈಟೀಂಗ್ ಮಾಡಲಾಗುತ್ತಿದೆ.ಮೈಸೂರು ದಸರಾ ಮೀರಿಸುವ ರೀತಿಯಲ್ಲಿ ಬೆಳಗಾವಿಯಲ್ಲಿ ದೀಪಾಲಂಕಾರ ನಡೆಯುತ್ತಿದೆ. ಲೈಟೀಂಗ್ ಮಾಡುವ ಕಾರ್ಯ ಹಗಲು ರಾತ್ರಿ ನಡೆಯುತ್ತಿದೆ.
ಬೆಳಗಾವಿಯ ಚನ್ನಮ್ಮ ವೃತ್ತ,ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ ಮತ್ತು ಧರ್ಮವೀರ ಸಂಬಾಜಿ ವೃತ್ತದಲ್ಲಿ ಈಗಾಗಲೇ ದೀಪಾಲಂಕಾರದ ಕಾರ್ಯ ಮುಕ್ತಾಯವಾಗಿದ್ದು, ಚನ್ನಮ್ಮ ವೃತ್ತದಲ್ಲಿ ಚನ್ನಮ್ಮ, ರಾಯಣ್ಣ ವೃತ್ತದಲ್ಲಿ ರಾಯಣ್ಣ ಶೈನಿಂಗ್ ಆಗಿದ್ದು ಸಂಬಾಜಿ ವೃತ್ತದಲ್ಲಿ ಅಶ್ವಾರೂಢ ಕೃಷ್ಣಣ ರಥ ಎಲ್ಲರ ಗಮನ ಸೆಳೆಯುತ್ತಿದೆ.
ದೀಪಾಲಂಕಾರದ ಮೂಲಕ ನಾಡಿನ ಇತಿಹಾಸ ಮತ್ತು ಸಂಸ್ಕೃತಿಯನ್ನು ಬಿಂಬಿಸಲಾಗುತ್ತಿದೆ. ನಾಡಿನ ಪ್ರಸಿದ್ಧ ದೇಗುಲಗಳ ಚಿತ್ರಗಳನ್ನು ವಿದ್ಯುತ್ ದೀಪಗಳಲ್ಲಿ ಬೆಳಗಿಸುವ ಕಾರ್ಯ ಬೆಳಗಾವಿ ಮಹಾನಗರದಲ್ಲಿ ಭರದಿಂದ ಸಾಗಿದೆ.
ಸರ್ಕಾರ ಇಡೀ ಬೆಳಗಾವಿ ಮಹಾನಗರವನ್ನು ಶೃಂಗರಿಸುವ ಸಂಕಲ್ಪ ಮಾಡಿದೆ. ಸೋನಿಯಾ ಗಾಂಧಿ,ರಾಹುಲ್ ಗಾಂಧಿ, ಪ್ರೀಯಾಂಕಾ ಗಾಂಧಿ ಅವರು ಬೆಳಗಾವಿಗೆ ಬರಲಿದ್ದಾರೆ, ಬೆಳಗಾವಿಯಲ್ಲೇ ಗಾಂಧಿ ಪರಿವಾರ ವಾಸ್ತವ್ಯ ಮಾಡಲಿದೆ.ಈ ಕಾರ್ಯಕ್ರಮ ಬೆಳಗಾವಿ ಮಹಾನಗರದಲ್ಲಿ ಹೊಸ ಇತಿಹಾಸ ನಿರ್ಮಿಸಲಿದೆ.