ಬೆಳಗಾವಿ- ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ,ಹೆತ್ತ ಮಗುವನ್ನು ಬಿಟ್ಟು ಪರಾರಿಯಾಗಿದ್ದ ಪಾಪಿ ತಾಯಿ ಅರೆಸ್ಟ್ ಆಗಿದ್ದಾಳೆ ಬೀಮ್ಸ್ ಆಸ್ಪತ್ರೆಯಲ್ಲಿ ಮಗುವನ್ನು ಬಿಟ್ಟು ಪರಾರಿಯಾಗಿದ್ದ ತಾಯಿ.ಬಿಬಿಜಾನ್ ಸದ್ದಾಮ್ ಹುಸೇನ್ ಸೈಯ್ಯದ್ ಬಂಧನವಾಗಿದೆ.ಮಗು ಜನನ ಆಗುತ್ತಿದ್ದಂತೆ ಮಗುವನ್ನು ಬಿಟ್ಟು ಹೋಗಿದ್ದ ಬಿಬಿಜಾನ್.ಬೈಲಹೊಂಗಲ ಮೂಲದವಳಾಗಿದ್ದಾಳೆ.
ಬಿಬಿಜಾನ್ ಎಂಬಾತಳನ್ನು ಎಪಿಎಂಸಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.ನಿನ್ನೆ ಮಗುವನ್ನು ಬಿಟ್ಟು ಪರಾರಿಯಾಗಿದ್ದ ಬಿಬಿಜಾನ್ ಪರಾರಿಯಾಗುತ್ತಿದ್ದಂತೆ ಮೂರು ದಿನದ ಮಗು ತೀರಿ ಹೋಗಿತ್ತು.ಬಿಬಿಜಾನ್ ಪರಾರಿಯಾಗುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು.ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆಕೈಗೊಂಡಿದ್ದಎಪಿಎಂಸಿಪೊಲೀಸರುಬಿಬಿಜಾನಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮಗು ಸಾಕುವುದು ಕಷ್ಟ ಎಂದು ಭಾವಿಸಿ ಮಗುವನ್ನು ಬಿಟ್ಟು ಹೋಗಿದ್ದ ಪಾಪಿ ತಾಯಿ.
ಈಗಾಗಲೇ ಮೂರು ಗಂಡು ಮಕ್ಕಳು ಹೊಂದಿರುವ ಬಿಬಿಜಾನ್.ಹೆಣ್ಣು ಮಗು ಎಂಬ ಕಾರಣಕ್ಕೆ ಮಗುವನ್ನು ಬಿಟ್ಟು ಹೋಗಿದ್ದಳು ಎಂದುಪೊಲೀಸರ ಎದುರು ಸ್ವಇಚ್ಛೆಯಿಂದ ಹೇಳಿಕೆ ಕೊಟ್ಟಿದ್ದಾಳೆ.ಬೆಳಗಾವಿ ಎಪಿಎಂಸಿ ಪೊಲೀಸ ಠಾಣೆಯಲ್ಲಿ ಕೇಸ್ ದಾಖಲಾಗಿದೆ.