ಬೆಳಗಾವಿ-ಬೆಳಗಾವಿಯ ಪರಿಸರ ನಿಯಂತ್ರಣ ಮಂಡಳಿ ಕಚೇರಿಯಲ್ಲಿ ಕಾರ್ಮಿಕರು ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ನೇಣು ಹಗ್ಗ ಹಾಕಿಕೊಂಡು ನಿಂತಿರೋ 50ಕ್ಕೂ ಹೆಚ್ಚು ಕಾರ್ಮಿಕರು,ಬ್ರಹ್ಮಾನಂದ ಸಾಗರ್ ಜಾಗ್ರಿ ಇಂಡಸ್ಟ್ರಿ ಮತ್ತು ಅಶಕಿನ್ಸ್ ಬಯೋಪಿಲ್ಸ್ ಕಾರ್ಖಾನೆ ಸಿಬ್ಬಂದಿಗಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಇರೋ ಕಾರ್ಖಾನೆ ಇದಾಗಿದೆ. 300ಕ್ಕೂ ಹೆಚ್ಚು ಕಾರ್ಖಾನೆ ಕಾರ್ಮಿಕರು ಕಚೇರಿಗೆ ಮುತ್ತಿಗೆ ಹಾಕಿ ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಬೆಳಗಾವಿ ಆಟೋ ನಗರದಲ್ಲಿ ಪರಿಸರ ನಿಯಂತ್ರಣ ಮಂಡಳಿ ಕಚೇರಿಗೆ ಮುತ್ತಿಗೆ ಹಾಕಿರುವ ಕಾರ್ಮಿಕರು
ಕಳೆದ ಮೂರು ವರ್ಷಗಳಿಂದ ಅನುಮತಿ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.ಕಚೇರಿಗೆ ಬೀಗಿ ಹಾಕಿ, ನೇಣು ಹಗ್ಗ ಹಾಕಿಕೊಂಡು ನಿಂತ ಕಾರ್ಮಿಕರು.
ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಒತ್ತಡದಿಂದ ಅನುಮತಿ ನೀಡುತ್ತಿಲ್ಲ ಎನ್ನುವ ಆರೋಪಿಸಿದ್ದಾರೆ.
150 ಕೋಟಿ ಬಂಡವಾಳ ಹೂಡಿಕೆ ಮಾಡಿರೋ ಕಾರ್ಖಾನೆ ಮಾಲೀಕರು.ಕಳೆದ ಮೂರು ವರ್ಷಗಳಿಂದ ಅನುಮಾತಿಗಾಗಿ ಕಾಯುತ್ತಿದ್ದು ಮಾಲೀಕ ಅಶೋಕ ಅಸ್ಕಿ ಆಗಿದ್ದು ಈಗ ಮಾಲಿಕನ ಪರವಾಗಿ ಅನುಮತಿಗಾಗಿ ಕಾರ್ಮಿಕರು ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.