ಬೆಳಗಾವಿ-ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಪುರಸಭೆ ವಾಹನ ಉರುಳಿದ ಪರಿಣಾಮ ವಾಹನ ಚಾಲಕ ನೀರು ಪಾಲಾದ ಘಟನೆ ನಡೆದಿದೆ.
ವಾಹನದಲ್ಲಿ ಸಿಲುಕಿದ್ದ ಚಾಲಕ ಗದಿಗೆಪ್ಪ ಕಾಮನ್ನವರ (40) ಸ್ಥಳದಲ್ಲೆ ಸಾವನ್ನೊಪ್ಪಿದ್ದಾನೆ.ಪ್ರಾಣಾಪಾಯಾದಿಂದ ಹೆಲ್ಪರ್ ಮಂಜುನಾಥ ಸಿಂಗನ್ನವರ ಪಾರಾಗಿದ್ದು ಪವಾಡ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ.ಪುರಸಭೆ ವ್ಯಾಪ್ತಿಯಲ್ಲಿ ಕಸ ಹೊತ್ತಯ್ಯುವ ವಾಹನ ಇದಾಗಿದ್ದು,ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಟಾಟಾ ಎಸ್ ವಾಹನ ಉರುಳಿದೆ
ರಭಸವಾಗಿ ಹರಿಯುವ ನೀರಿನಲ್ಲಿ ಬಿದ್ದ ಪುರಸಭೆ ವಾಹನ ಇದೇ ವಾಹನ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.