Breaking News

ಟ್ರ್ಯಾಕ್ಟರ್ ಹರಿಸಿ, ತಮ್ಮನನ್ನೇ ಕೊಲೆಗೈದ ಪಾಪಿ ಅಣ್ಣಾ

ಬೆಳಗಾವಿ-ಟ್ರ್ಯಾಕ್ಟರ್ ಹರಿಸಿ ಒಡಹುಟ್ಟಿದ ತಮ್ಮನನ್ನೇ ಭೀಕರವಾಗಿ ಕೊಲೆಗೈದ ಪಾಪಿ ಅಣ್ಣಾ, ಹತ್ಯೆ ಮಾಡಿದ ಬಳಿಕ ಠಾಣೆಗೆ ಹಾಜರಾಗಿದ್ದಾನೆ.ಆಸ್ತಿವಿವಾದ, ಕುಡಿತದ ಚಟ, ಕಿರುಕುಳಕ್ಕೆ ಬೇಸತ್ತು ಸಹೋದರನ ಭೀಕರ ಹತ್ಯೆ ಮಾಡಿದ್ದಾನೆ ಎಂದು ಗೊತ್ತಾಗಿದೆ.ಈ ಘಟನೆ ನಡೆದಿದ್ದು,ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣ ಹೊರವಲಯದ‌ ಜಮೀನಿನಲ್ಲಿ.

ಯರಗಟ್ಟಿಯ ಗೋಪಾಲ ಬಾವಿಹಾಳ( 27) ಹತ್ಯೆಯಾದ ದುರ್ದೈವಿಯಾಗಿದ್ದು,ಮಾರುತಿ ಬಾವಿಹಾಳ(30) ತಮ್ಮನನ್ನೇ ಹತ್ಯೆ ಮಾಡಿದ ಪಾಪಿ ಅಣ್ಣ ಎಂದು ಗೊತ್ತಾಗಿದೆ‌.ನಿತ್ಯ ಮದ್ಯ ಸೇವಿಸಿ ಬಂದು ಪಿತ್ರಾರ್ಜಿತ ಆಸ್ತಿ ಅನುಭವಿಸಲು ನಿಮಗೆ ಬಿಡಲ್ಲ‌ ಎಂದು ಗೋಪಾಲ ಕಿರಿಕಿರಿ ಮಾಡುತ್ತಿದ್ದ ಎಂದು ಹೇಳಲಾಗಿದೆ.

ಅಲ್ಲದೇ ತನ್ನ ಪಾಲಿಗೆ ಬಂದಿದ್ದ ಟ್ರ್ಯಾಕ್ಟರ್ ಪತ್ನಿ ಮನೆಯಲ್ಲಿ ಇರಿಸಿದ್ದ ಗೋಪಾಲ ನಿತ್ಯ ಕಿರಕಿರಿ ಮಾಡುತ್ತಿದ್ದ,ತಮ್ಮನ ಕಿರಿಕಿರಿಗೆ ಬೇಸತ್ತು ಬೈಕ್ ಮೇಲೆ ಹೊರಟಿದ್ದ ಗೋಪಾಲ ಮೇಲೆ ಟ್ರ್ಯಾಕ್ಟರ್ ಹರಿಸಿ ಅಣ್ಣ ಮಾರುತಿ ಒಡಹುಟ್ಟಿದ ತಮ್ಮನನ್ನೇ ಕೊಲೆ ಮಾಡಿದ್ದಾನೆ.

ಗೋಪಾಲ ತಂದೆ ಅರ್ಜುನ್‌ ಬಾವಿಹಾಳಗೆ ಮೂವರು ಗಂಡು ಮಕ್ಕಳು ಇದ್ದಾರೆ.ಕಳೆದ ಹದಿನೈದು ದಿನಗಳ ಹಿಂದಷ್ಟೇ ತಮಗೆ ಬಂದ ಜಮೀನು ಪಾಲು, ಹಣ ಪಡೆದು ಬೇರೆ ಬೇರೆಯಾಗಿದ್ದ ಸಹೋದರರು.ಮೂವರು ಜನ ಸಹೋದರರಿಗೂ ಒಂದೊಂದು ಟ್ರಾಕ್ಟರ್ ಪಾಲಾಗಿತ್ತು.

ಮೃತ ಗೋಪಾಲನಿಗೆ ಬಂದಿದ್ದ ಟ್ರಾಕ್ಟರ್ ಹೆಂಡತಿ ಮನೆಯಲ್ಲಿ ಇಟ್ಟಿದ್ದಕ್ಕೆ ಗಲಾಟೆ ಶುರುವಾಗಿತ್ತು.ನಾನು ದುಡಿದಿರೋನ್ನ ಹಾಳು ಮಾಡ್ತಿರುವೆ ಎಂದು ಆಗಾಗ್ಗೆ ಇಬ್ಬರು ಸಹೋದರ ನಡುವೆ ಜಗಳ ಗಲಾಟೆ ಆಗ್ತಾ ಇತ್ತು ಕುಡಿತದ ದಾಸನಾಗಿದ್ದ ಗೋಪಾಲ ಮನೆಯವರಿಗೂ ಬೇಡಾಗಿದ್ದ,ಟ್ರಾಕ್ಟರ್ ವಿಚಾರಕ್ಕೆ ಇಬ್ಬರು ಸಹೋದರರ ಮಧ್ಯೆ ಬೆಳಗ್ಗೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿದ್ದು, ಈ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

ಯರಗಟ್ಟಿ ಹೊರವಲಯದ ಬೂದಿಕೊಪ್ಪ ರಸ್ತೆಯಲ್ಲಿ ಗೋಪಾಲ ಬೈಕ್ ಬರುವಾಗ ಟ್ರಾಕ್ಟರ್ ನಿಂದ ಡಿಕ್ಕಿ ಹೊಡೆದಿದ್ದಾನೆ.ಅವಘಡದಲ್ಲಿ ಜಮೀನಿನಲ್ಲಿ ಬಿದ್ದ ಗೋಪಾಲ ಮೇಲೆ ಮನಬಂದಂತೆ ಟ್ರಾಕ್ಟರ್ ಹಾಯಿಸಿದ ಪಾಪಿ ಮಾರುತಿ ತಮ್ಮ ಗೋಪಾಲನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.ಟ್ರಾಕ್ಟರ್ ನಡಿ ಸಿಲುಕಿದ ಭಯಾನಕ ದೃಶ್ಯವನ್ನು ಸ್ಥಳಿಯರು ಮೊಬೈಲ್ ನಲ್ಲಿ ಶೂಟ್ ಮಾಡಿದ್ದಾರೆ.ಕೊಲೆ ಮಾಡಿದ ಮಾರುತಿ ತಾನೇ ಪೊಲೀಸ ಠಾಣೆಗೆ ಶರಣಾಗಿದ್ದಾನೆ.ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *