ಬೆಳಗಾವಿ- ಮಹಾ ಕುಂಭಮೇಳಕ್ಕೆ ಹೋಗಿ ವಾಪಾಸ್ ಆಗುವಾಗ ಟಿ.ಟಿ ವಾಹನ ಅಪಘಾತಕ್ಕೀಡಾಗಿ ಬೆಳಗಾವಿಯ ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದೆ.ಬೆಳಗಾವಿಯ ಶಹಾಪುರ ನಿವಾಸಿ ಡ್ರೈವರ್ ಸಾಗರ್(55), ಗಣೇಶಪುರ ನಿವಾಸಿ ನೀತಾ ಪಾಟೀಲ್(50) ಮೃತರ ಗುರುತು ಪತ್ತೆಯಾಗಿದ್ದು ಉಳಿದವರ ಗುರುತು ಪತ್ತೆ ಹೆಚ್ಚುತ್ತಿದ್ದಾರೆ
ಮಹಾ ಕುಂಭ ಮೇಳಕ್ಕೆ ಹೋಗಿ ವಾಪಾಸ್ ಆಗ್ತಿದ್ದ ಭಕ್ತರ ವಾಹನ ಅಪಘಾತಕ್ಕೀಡಾಗಿದೆ.
ಬೆಳಗಾವಿಯ ನಾಲ್ವರ ದುರ್ಮರಣ ಹೊಂದಿದ್ದಾರೆ.ಇಬ್ಬರು ಸ್ಥಳೀಯ ಇಂದೋರ್ ನಿವಾಸಿಗಳು ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಟ್ಟು ಆರು ಜನ ಮೃತಪಟ್ಟಿದ್ದು ಇದರಲ್ಲಿ ನಾಲ್ವರು ಬೆಳಗಾವಿಯವರು ಎಂದು ಹೇಳಲಾಗುತ್ತಿದ್ದು ನಾಲ್ಕರಲ್ಲಿ ಇಬ್ಬರನ್ನು ಗುರುತಿಸಲಾಗಿದ್ದು ಇನ್ನಿಬ್ಬರ ಗುರುತು ಪತ್ತೆಯಾಗಿಲ್ಲ.
ಟಿಟಿ ವಾಹನದಲ್ಲಿ ಒಂದು ವಾರದ ಹಿಂದೆ 19ಜನ ಪ್ರಯಾಗ್‌ರಾಜ್ ಗೆ ತೆರಳಿದ್ದರು.
ದರ್ಶನ ಮುಗಿಸಿ ವಾಪಾಸ್ ಆಗುವ ವೇಳೆ ಹಿಂದಿನಿಂದ ಲಾರಿಗೆ ಟಿಟಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.ಆರು ಜನ ಸಾವು ಹತ್ತು ಜನರಿಗೆ ಗಾಯಗೊಂಡಿದ್ದು ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.