Breaking News

ಮಧ್ಯಪ್ರದೇಶದ ಜಬಲ್ ಪೂರದಲ್ಲಿ ಗೋಕಾಕಿನ ಆರು ಜನ ಸಾವು

ಬೆಳಗಾವಿ-ಮಧ್ಯಪ್ರದೇಶದ ಜಬಲ್ ಪುರ ನಲ್ಲಿ ನಡೆದ ವಾಹನ ಅಪಘಾತ‌ದಲ್ಲಿ ಗೋಕಾಕಿನ ಆರು ಜನ ಮೃತಪಟ್ಟಿರುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ.

ಗೋಕಾಕಿನ ಆರುಜನ ಯಾತ್ರಾರ್ಥಿಗಳು ಮೃತಪಟ್ಟಿದ್ದು ಇಬ್ಬರು ಗಾಯಗೊಂಡಿದ್ದಾರೆ.ಜಬಲ್ ಪುರ ಜಿಲ್ಲೆಯ ಖಿತೌಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇಂದು ನಸುಕಿನ ಜಾವ 5 ಗಂಟೆಗೆ ‌ ಅಪಘಾತ ನಡೆದಿದೆ.KA49 M 5054 ಕ್ರೂಸರ್ ತೂಫಾನ್ ವಾಹನ ಅಪಘಾತಕ್ಕೀಡಾಗಿದೆ.ಪ್ರಯಾಗರಾಜ್ ದಿಂದ ಜಬಲ್ ಪುರ ಗೆ ತೆರಳುವಾಗ ಈ ಅಪಘಾತ ನಡೆದಿದೆ
ಆರು ಜನ ಸ್ಥಳದಲ್ಲಿಯೇ ಸಾವನ್ನೊಪ್ಪಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ.

ಮೃತರು
ಬಾಲಚಂದ್ರ‌ ಗೌಡರ(50)
ಸುನೀಲ್ ಶೇಡಶ್ಯಾಳೆ(45)
ಬಸವರಾಜ್ ಕುರ್ತಿ (63)
ಬಸವರಾಜ್ ದೊಡಮಾಳ್(49)
ಈರಣ್ಣ ಶೇಬಿನಕಟ್ಟಿ(27)
ವಿರುಪಾಕ್ಷ ಗುಮತಿ (61)
ಎಂದು ಗುರುತಿಸಲಾಗಿದೆ.ಗಾಯಗೊಂಡವರು
ಮುಸ್ತಾಕ ಶಿಂಧಿಕುರಬೇಟ
ಸದಾಶಿವ ಉಪದಲಿ ಎಂದು ತಿಳಿದು ಬಂದಿದೆ

Check Also

ರೇಖಾ ಗುಪ್ತಾ ದೆಹಲಿ ಸಿಎಂ ಇಂದು ಪ್ರಮಾಣ ವಚನ

ಬೆಳಗಾವಿ- ಬಿಜೆಪಿ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ ಉನ್ನತ ಸ್ಥಾನ ಕೊಡುತ್ತಾರೆ ಎನ್ನುವ ವಿಚಾರ ಈಗ ಮತ್ತೊಮ್ಮೆ ಸಾಭೀತಾಗಿದೆ. ಪ್ರಥಮ ಬಾರಿಗೆ …

Leave a Reply

Your email address will not be published. Required fields are marked *