ಬೆಳಗಾವಿ-ಕಂಡಕ್ಟರ್ ಮೇಲೆ ಪೋಕ್ಸೋ ಪ್ರಕರಣ ಈಗ ನಿರಾಳವಾಗಿದೆ. ಪೋಕ್ಸೋ ವಿಶೇಷ ನ್ಯಾಯಾಲಯಕ್ಕೆ ಬೆಳಗಾವಿ ಪೋಲೀಸರು B ರಿಪೋರ್ಟ್ ಸಲ್ಲಿಸಿದ್ದಾರೆ.
ಕುಟುಂಬಸ್ಥರು ಕೇಸ್ ವಾಪಸ್ ಪಡರದ ಬೆನ್ನಲ್ಲೇ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಕೆಯಾಗಿದೆ.ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ರಿಂದ ನ್ಯಾಯಾಲಯಕ್ಕೆ ಬಿ ರಿಪೋರ್ಟ್ಸಲ್ಲಿಕೆಯಾಗಿದೆ.ಮಾರಿಹಾಳ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಿಸಿದ್ದ
ಅಪ್ರಾಪ್ತೆಯ ಚಿಕ್ಕಮ್ಮ,ಈ ಕೇಸ್ ಭಾಷಾ ವಿವಾದವಾಗಿ ಮಾರ್ಪಟ್ಟ ಹಿನ್ನೆಲೆಯಲ್ಲಿ ಪ್ರಕರಣ ವಾಪಸ್ ಪಡೆಯಲಾಗಿತ್ತು. ಕುಟುಂಬಸ್ಥರಿಂದ ವಿಡಿಯೋ ಹೇಳಿಕೆ ಪಡೆದು ನ್ಯಾಯಾಲಯಕ್ಕೆ ಬಿ. ರಿಪೋರ್ಟ್ ಸಲ್ಲಿಸಲಾಗಿದೆ.
ಕಂಡಕ್ಟರ್ ಮೇಲಿನ ಪೋಕ್ಸೋ ಕೇಸ್ ಹಿಂಪಡೆಯುವಂತೆ ಕರವೇ ಪ್ರೊಟೆಸ್ಟ್ ಮಾಡಿತ್ತು,ಕರವೇ ಪ್ರೊಟೆಸ್ಟ್ ಹಾಗೂ ಉಭಯ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದ ಹಿನ್ನಲೆಯಲ್ಲಿ,ಮಾಧ್ಯಮಗಳಿಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ಕುಟುಂಬಸ್ಥರು ಕೇಸ್ ವಾಪಸ್ ಪಡೆದಿದ್ದರು.
ಈಗ ನ್ಯಾಯಾಲಯಕ್ಕೆ ಬಿ. ರಿಪೋರ್ಟ್ ಸಲ್ಲಿಸಿದ ಬೆಳಗಾವಿ ಪೊಲೀಸರು ಕಂಡೆಕ್ಟರ್ ವಿರುದ್ಧ ದಾಖಲಿಸಲಾಗಿದ್ದ ಪೋಕ್ಸೋ ಪ್ರಕರಣಕ್ಕೆ ಪೂರ್ಣವಿರಾಮ ನೀಡಿದ್ದಾರೆ