ಬೆಳಗಾವಿ : ಹಲಗಾ ಗ್ರಾಮದ NH 48 ರಸ್ತೆ ಮೇಲೆ ರಿಕ್ಷಾ ಚಾಲಕನೊರ್ವ ಅತೀವೇಗವಾಗಿ ಚಲಾಯಿಸಿಕೊಂಡು ಹೋಗುವ ವೇಳೆ ಡಿವೈಡರಗೆ ಹಾಯಿಸಿ ಗಂಭೀರವಾಗಿ ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಮೃತಪಟ್ಟಿರುವ ಘಟನೆ ನಿನ್ನೆ ತಡರಾತ್ರಿ ಸಂಭವಿಸಿದೆ.
ನ್ಯೂ ಗಾಂಧಿನಗರದ 45 ವರ್ಷದ ಮಹ್ಮದಲಿ ಶಬ್ಬಿರಹ್ಮದ ಭಾರಗೀರ ಮೃತ ದುರ್ದೈವಿ. ಧಾಮನೆ ಗ್ರಾಮದಲ್ಲಿರುವ ಅತ್ತೆ ಮನೆಯಲ್ಲಿ ರಾತ್ರಿ ಊಟ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಹಲಗಾ ಪಬ್ಲಿಕ್ ಶಾಲೆ ಹತ್ತಿರ ಈ ಘಟನೆ ಸಭವಿಸಿದೆ. ಘಟನೆ ನಡೆದ ಸ್ಥಳಕ್ಕೆ ಹಿರೇಬಾಗೇವಾಡಿ ಪಿಎಸ್ಐ ಅವಿನಾಶ ಯರಗೊಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಕೊಂಡಿದ್ದಾರೆ.