.ಬೆಳಗಾವಿ-ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಗೆ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ದೂರು ನೀಡಿದ್ದಾರೆ.
ಎಫ್‌ಐಆರ್ ದಾಖಲು ಪ್ರತಿ ನೀಡದಿದ್ರೇ ಕೋರ್ಟ್ ಗೆ ಹೋಗುವುದಾಗಿ ಗಡಾದ್ ಎಚ್ಚರಿಕೆ ನೀಡಿದ್ದಾರೆ.
ಎಪ್ರಿಲ್ 28ರಂದು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಿದ್ರಾಮಯ್ಯ ಅವರು ಪೊಲೀಸ್ ಅಧಿಕಾರಿ ಮೇಲೆ ಕೈ ಎತ್ತಿದ್ದ ಕಾರಣ ಸಿಎಂ ವಿರುದ್ಧ ಭೀಮಪ್ಪ ಗಡಾದ್ ಬೆಳಗಾವಿ ಮಹಾನಗರದ ಕ್ಯಾಂಪ್ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬೆಳಗಾವಿಯ ಕ್ಯಾಂಪ್ ಠಾಣೆಯ ಹದ್ದಿಯಲ್ಲಿ ಬರುವ ಸಿಪಿಎಡ್ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಬಿಜೆಪಿ ಕಾರ್ಯಕರ್ತರು ನುಗ್ಗಿ ಸಿಎಂ ಅವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಿದ ಸಂಧರ್ಭದಲ್ಲಿ ಸಿಎಂ ಸಿದ್ರಾಮಯ್ಯ ಅವರು ಅದೇ ಸ್ಥಳದಲ್ಲಿ ಬಂದೋಬಸ್ತಿಯಲ್ಲಿದ್ದ ಧಾರವಾಡದ ಎಎಸ್‌ಪಿ ನಾರಾಯಣ ಭರಮನಿ ಮೇಲೆ ಕೈ ಎತ್ತಿದ್ದ ಘಟನೆ ನಡೆದಿತ್ತು.
ಸಿಎಂ ಸಿದ್ದರಾಮಯ್ಯ.ಸಿದ್ದರಾಮಯ್ಯ ಭಾಷಣ ಮಾಡಿದ್ದ ಸಿಡಿ ಸಮೇತ ದೂರು ಕೊಟ್ಟಿರುವ ಭೀಮಪ್ಪ ಗಡಾದ್
ಭಾರತೀಯ ನ್ಯಾಯ ಸಂಹಿತೆ 2023 ಕಲಂ 132ರ ಪ್ರಕಾರ ಕ್ಯಾಂಪ್ ಠಾಣೆಯಲ್ಲಿ ಸಿಎಂ ಸಿದ್ರಾಮಯ್ಯ ವಿರುದ್ಧ ದೂರು ನೀಡಿದ್ದು,ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೂ ಸಿದ್ದರಾಮಯ್ಯ ವಿರುದ್ಧ ಗಡಾದ್ ದೂರು ನೀಡಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ