Breaking News

ಬೆಳಗಾವಿಯಲ್ಲಿ ಐಸೋಲೇಟ್ ಆದ ಬ್ರಿಟನ್ ಮಹಿಳೆ

ಬೆಳಗಾವಿ -ಲಂಡನ್ ನಿಂದ ಬೆಳಗಾವಿಗೆ ಆಗಮಿಸಿದ ಮಹಿಳೆ ಗಂಟಲು ಮಾದರಿ ಸಂಗ್ರಹಿಸಲಾಗಿದ್ದು,ಬಿಟನ್ ಮಹಿಳೆಯನ್ನು ಬೆಳಗಾವಿಯಲ್ಲಿ ಐಸೋಲೇಷನ್ ಆಗುವಂತೆ ಬೆಳಗಾವಿಯ ವೈದ್ಯರು ಸಲಹೆ ನೀಡಿದ್ದಾರೆ.

ಬ್ರಿಟನ್ ನಲ್ಲಿ ಮಹಾಮಾರಿ ಕೊರೋನಾ ರೂಪಾಂತರವಾಗಿ ತಾಂಡವಾಡುತ್ತಿರುವ ಹಿನ್ನಲೆಯಲ್ಲಿ ,ಬ್ರಿಟನ್ ನಿಂದ ಬೆಳಗಾವಿಗೆ ಆಗಮಿಸಿರುವ ಬ್ರಿಟನ್ ಮಹಿಳೆಯ ಕುರಿತು ಅರೋಗ್ಯ ಇಲಾಖೆ ಸ್ಪೆಷಲ್ ಕೇರ್ ತಗೆದುಕೊಂಡಿದೆ.

ಡಿಸೆಂಬರ್ 14 ರಂದು 35 ವರ್ಷದ ಮಹಿಳೆ ಲಂಡನ್ ನಿಂದ
ಬೆಂಗಳೂರಿಗೆ ಆಗಮಿಸಿ ನಂತರ ಜಮಖಂಡಿಗೆ ತೆರಳಿ ನಂತರ ಬೆಳಗಾವಿಗೆ ಆಗಮಿಸಿದ್ದರು. ಈ ಕುರಿತು
ಬೆಳಗಾವಿ ವೈದ್ಯರಿಗೆ ಇಂದು ಮಾಹಿತಿ ದೊರಕಿದ್ದು
ಗಂಟಲು ಮಾದರಿ ಸಂಗ್ರಹಿಸಿ ಟೆಸ್ಟ್ ಗೆ ರವಾನೆ ಮಾಡಿದ್ದಾರೆ.

ಇಂದು ಸಂಜೆ ಅಥವಾ ನಾಳೆ ಟೆಸ್ಟ್ ರಿಪೋರ್ಟ್ ಬರೋ ಸಾಧ್ಯತೆ ಇದೆ. ಮಹಿಳೆಗೆ ಮನೆಯಲ್ಲಿ ಐಸೋಲೇಷನ್ ಆಗುವಂತೆ ವೈದ್ಯರ ಸಲಹೆ ನೀಡಿದ್ದು ಪತಿ ಹಾಗೂ ಇಬ್ಬರು ಮಕ್ಕಳು ಲಂಡಲ್ ನಲ್ಲಿ ವಾಸವಾಗಿದ್ದಾರೆ.

Check Also

ವೀರ ಮದಕರಿ ಪುತ್ಥಳಿ ಸ್ಥಾಪನೆ- ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚನೆ:

ಪರಿಶಿಷ್ಟರ ದೂರು ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ …

Leave a Reply

Your email address will not be published. Required fields are marked *