ಬೆಳಗಾವಿ-ರಾಷ್ಟ್ರ ರಾಜಧಾನಿ ಹಾಗೂ ರಾಜ್ಯ ರಾಜಧಾನಿಗೆ ಬೆಳಗಾವಿಯಿಂದ ದಿನನಿತ್ಯ ಹಾರಲಿದೆ ಇಂಡಿಗೋ ವಿಮಾನ : ಸಂಸದ ಜಗದೀಶ ಶೆಟ್ಟರ ಹೇಳಿದ್ದಾರೆ.
ಬೆಳಗಾವಿ: ಬೆಳಗಾವಿ – ದೆಹಲಿ ಮತ್ತು ಬೆಂಗಳೂರು – ಬೆಳಗಾವಿ ನಡುವೆ ಬರುವ 16 ಸೆಪ್ಟೆಂಬರ್ 2025 ರಂದು ಮತ್ತು 21 ಸೆಪ್ಟೆಂಬರ್ 2025 ರಂದು ಇಂಡಿಗೋ ವಿಮಾನ ಎಂದಿನಂತೆ ದಿನನಿತ್ಯದ ಸಂಚಾರ ಆರಂಭಿಸಲಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಸಂಸದರಾದ ಜಗದೀಶ್ ಶೆಟ್ಟರ್ ಇವರು ತಿಳಿಸಿದ್ದಾರೆ.
ಕೆಲವು ದಿನಗಳಿಂದ ಇಂಡಿಗೋ ಬೆಳಗಾವಿ – ದೆಹಲಿ ನಡುವಿನ ತನ್ನ ಸಂಚಾರವನ್ನು ಎರಡು ದಿನಗಳಿಗೊಮ್ಮೆ ನಡೆಸುತ್ತಿತ್ತು ಮತ್ತು ಬೆಂಗಳೂರು – ಬೆಳಗಾವಿ ನಡುವೆ ಬೆಳಗಿನ ಸಂಚಾರವನ್ನು ರದ್ದು ಮಾಡಲಾಗಿದ್ದು ಇಲ್ಲಿ ಸ್ಮರಣಿಯ.
ಇಂಡಿಗೋ ವಿಮಾನಯನ ಅಧಿಕಾರಯೊಂದಿಗೆ ಸಭೆ ನಡೆಸಿ, ಒತ್ತಾಯ ಮಾಡಿ, ಈ ಕ್ರಮ ಜರುಗಿಸಿದ ಬಗ್ಗೆ ಸಂಸದರಾದ ಶ್ರೀ ಜಗದೀಶ ಶೆಟ್ಟರ್ ತಮ್ಮ ಸಂತಸ ವ್ಯಕ್ತ ಪಡಿಸಿದ್ದು, ಇಂಡಿಗೋ ವಿಮಾನಯಾನ ಅಧಿಕಾರಿಗಳಿಗೆ ತಮ್ಮ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ