ಬೆಳಗಾವಿ- ಪಕ್ಕದ ಮಹಾರಾಷ್ಟ್ರದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದ ಆತಂಕ ಎದುರಾಗಿದೆ.
ಮಹಾರಾಷ್ಟ್ರದ ಕೋಯ್ನಾ ಜಲಾಶಯ ಶೇ 80 % ರಷ್ಟು ಭರ್ತಿಯಾಗಿದ್ದು ಇವತ್ತು ಒಂದೇ ದಿನ ಎರಡು ಕಂತುಗಳಲ್ಲಿ 30 ಸಾವಿರ ಕ್ಯುಸೆಕ್ಸ್ ನೀರನ್ನು ಕೃಷ್ಣಾ ನದಿಗೆ ಹರಿದು ಬಿಡಲಾಗಿದೆ. ಕೃಷ್ಣಾ ನದಿಯಲ್ಲಿ ಈಗಾಗಲೇ 1 ಲಕ್ಷ 56 ಸಾವಿರ ಕ್ಯಸೆಕ್ಸ್ ಒಳಹರಿವು ಇದ್ದು,ಕೋಯ್ನಾ ಜಲಾಶಯದಿಂದ ಬಿಡುಗಡೆಯಾದ ನೀರು ಕೃಷ್ಣಾ ನದಿಯ ಮೂಲಕ ಬೆಳಗಾವಿ ಗಡಿ ಪ್ರವೇಶ ಮಾಡಿದ್ರೆ ಇಂದು ರಾತ್ರಿ ಕೃಷ್ಣಾ ನದಿಯ ಒಳ ಹರಿವು 2ಲಕ್ಷ ಕ್ಯಸೆಕ್ಸ್ ತಲುಪಲಿದ್ದು,ಕೃಷ್ಣಾ ನದಿಗೆ ಪ್ರವಾಹ ಬರುವ ಎಲ್ಲ ಸಾಧ್ಯತೆಗಳಿವೆ.
ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇರುವದರಿಂದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವೀಂದ್ ಕಾರಜೋಳ ಅವರು ಬೆಳಗಾವಿಗೆ ಧಾವಿಸಿದ್ದಾರೆ. ಸರ್ಕ್ಯುಟ್ ಹೌಸ್ ನಲ್ಲಿ ಬೆಳಗಾವಿ ಜಿಲ್ಲೆಯ ಅಧಿಕಾರಿಗಳ ಜೊತೆ ಸಭೆ ನಡೆಸಿ,ಪ್ರವಾಹ ಪರಿಸ್ಥಿತಿ ಎದುರಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ.
ಅವ್ಯಾಹತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಬದುಕು ದಿಕ್ ದಿವಾಳಿಯಾಗಿದೆ.
ಪ್ರೀತಂ ವರ್ಗಾವಣೆ
ಬೆಳಗಾವಿಯ ಬುಡಾ ಆಯುಕ್ತ ಪ್ರೀತಂ ನರಸಲಾಪೂರೆ ಅವರನ್ನು ಬುಡಾ ದಿಂದ ಕಾಡಾ ಗೆ ವರ್ಗಾವಣೆ ಮಾಡಲಾಗಿದೆ.
ಪ್ರೀತಂ ನರಸಲಾಪೂರೆ ಅವರು ಬೆಳಗಾವಿಯ ಕಾಡಾ ಆಯುಕ್ತರಾಗಿ ಅಧಿಕಾರ ಸ್ವೀಕಾರ ಮಾಡಲಿದ್ದು ಬೆಳಗಾವಿಯ ಬುಡಾ ಆಯುಕ್ತರಾಗಿ ಜಿ.ಟಿ ದಿನೇಶ್ ಕುಮಾರ್ ಅವರು ಅಧಿಕಾರ ಸ್ವೀಕಾರ ಮಾಡಲಿದ್ದಾರೆ.