ಬೆಳಗಾವಿ- ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಅಲಖನೂರ ಗ್ರಾಮದಲ್ಲಿ ಎರಡು ವರ್ಷದ ಮಗು ಶವವಾಗಿ ಪತ್ತೆಯಾಗಿದೆ.
ತೋಟದ ಮನೆಯ ಪಕ್ಕದ ಬೋರವೆಲ್ ನಿಂದ ಮಗುವಿನ ಶವವನ್ನು ಹೊರ ತೆಗೆಯುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂಧಿ ಯಶಸ್ವಿಯಾಗಿದ್ದಾರೆ.
ಎರಡು ವರ್ಷದ ಮಗು ಶರತ ನನ್ನು ತಂದೆ ಸಿದ್ಧಪ್ಪ ಕೊಲೆ ಮಾಡಿದ್ದಾನೆ ಎಂದು ಮಗುವಿನ ಅಜ್ಜಿ ಆರೋಪಿಸಿದ್ದು ತಂದೆ ಸಿದ್ಧಪ್ಪ ಕೃತ್ಯ ತಾನೇ ಮಾಡಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದು ಪೋಲೀಸರು ತಂದೆ ಸಿದ್ದಪ್ಪನ ಮೇಲೆ ನಿಗಾ ವಹಿಸಿದ್ದಾರೆ.
ಮಗುವಿನ ಕಾಲಿಗೆ ಬಟ್ಟೆಯಿಂದ ಕಟ್ಟಿ ತಂದೆ ಸಿದ್ಧಪ್ಪನೇ ಮಗುವನ್ನು ತೋಟದ ಮನೆಯ ಸಮೀಪದಲ್ಲಿದ್ದ ಬೋರವೆಲ್ ಗೆ ಹಾಕಿದ್ದ ಎಂದು ಮಗುವಿನ ಅಜ್ಜಿ ಸರಸ್ವತಿ ಆರೋಪಿಸಿದ್ದಾಳೆ.
ಮಗುವಿನ ಶವವನ್ನು ಬೋರವೆಲ್ ನಿಂದ ಹೊರ ತೆಗೆಯಲಾಗಿದ್ದು ಪೋಲೀಸರು ತನಿಖೆ ಮುಂದುವರೆಸಿದ್ದಾರೆ. ಮಗುವಿನ ಸಾವಿನ ಕುರಿತು ಪೋಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದಾರೆ.
ಮಗುವನ್ನು ನಿಜವಾಗಿಯೂ ಆತನ ತಂದೆ ಸಿದ್ಧಪ್ಪ ಕೊಲೆ ಮಾಡಿದ್ದಾನೆಯೇ ಎಂಬುದು ಪೋಲೀಸರ ತನಿಖೆಯ ನಂತರ ಖಚಿತವಾಗಲಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ