ಬೆಳಗಾವಿ-ಅನಗೋಳದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನ ಪ್ರಕರಣಕ್ಕೆ ಸಮಂಧಿಸಿದಂತೆ ಮೂವರು ಪುಂಡರನ್ನು ಬೆಳಗಾವಿ ಪೋಲೀಸರು ಅರೆಸ್ಟ್ ಮಾಡಿದ್ದಾರೆ.
*ಪ್ರತಿಮೆ ಹಾನಿ ಮಾಡಿ ದುಷ್ಕೃತ್ತ ಎಸಗಿದ ಮೂವರ ಬಂಧನವಾಗಿದ್ದು ಬೆಳಗಾವಿ ತಾಲೂಕಿನ ಅನಗೋಳದ ಕನಕದಾಸ ಕಾಲೋನಿಯಲ್ಲಿ ನಡೆದಿದ್ದ ಘಟನೆಯ ಜಾಲವನ್ನು ಪೋಲೀಸರು ಪತ್ತೆ ಮಾಡಿದ್ದಾರೆ.
ಡಿ.18ರಂದು ಪ್ರತಿಮೆಯನ್ನ ಬೀಳಿಸಿ ಖಡ್ಗ, ಗುರಾಣಿ ಬೇರ್ಪಡಿಸಿ ವಿಕೃತಿ ಮೆರದಿದ್ದ ಪುಂಡರು ಪೋಲೀಸರ ಬಲೆಗೆ ಬಿದ್ದಿದ್ದಾರೆ. ಕಲ್ಲು ತೂರಾಟ ನಡೆಸಿದ ಪುಂಡರಿಂದಲೇ ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ರಾಯಣ್ಣ ಮೂರ್ತಿ ಹಾನಿ ಮಾಡಿದ್ದರು.
ಈ ಕುರಿತು ಟೀಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ